25 October 2025 | Join group

1974ರಿಂದ ನಡೆದ ಎಲ್ಲಾ ಆಂದೋಲನಗಳ ತನಿಖೆ – ಭವಿಷ್ಯದ ಗಲಭೆ ತಡೆಯಲು ಅಮಿತ್ ಶಾ ಮಹತ್ವದ ಹೆಜ್ಜೆ

  • 23 Sep 2025 04:22:15 PM

ದೇಶದಲ್ಲಿ ನಡೆಯುವ ಪ್ರಯೋಜಿತ ಚಳುವಳಿ ಅಥವಾ ಗಲಭೆಗಳನ್ನು ಹತ್ತಿಕ್ಕುವ ಸಲುವಾಗಿ ದೇಶದ ಗೃಹ ಇಲಾಖೆ ಮುಂಜಾಗೃತಾ ಕ್ರಮವಾಗಿ ಮಹತ್ವದ ಯೋಜನೆಯೊಂದನ್ನು ಅನುಷ್ಠಾನಗೊಳಿಸಲಿದೆ ಎಂದು ತಿಳಿದುಬಂದಿದೆ. 

 

ಇಂಡಿಯನ್ ಎಕ್ಸ್‌ಪ್ರೆಸ್ ಮಾಧ್ಯಮದಲ್ಲಿ ವರದಿಯಾದಂತೆ, 1974 ರಿಂದೀಚೆಗೆ ನಡೆದ ಎಲ್ಲಾ ಪ್ರಮುಖ ಪ್ರತಿಭಟನೆಗಳ ತನಿಖೆಗೆ ಗೃಹ ಸಚಿವ ಅಮಿತ್ ಶಾ ಆದೇಶಿಸಿದ್ದಾರೆ. ಹಣಕಾಸಿನ ಅಂಶಗಳು, ತೆರೆಮರೆಯ ಆಟಗಾರರು ಮತ್ತು ಫಲಿತಾಂಶಗಳನ್ನು ಪತ್ತೆಹಚ್ಚುವ ಪ್ರಕ್ರಿಯೆಯಲ್ಲಿದ್ದಾರೆ ಎನ್ನಲಾಗಿದೆ. 

 

ಬದ್ಧ ಹಿತಾಸಕ್ತಿಗಳಿಂದ ಉತ್ತೇಜಿಸಲ್ಪಟ್ಟ ಭವಿಷ್ಯದ ಸಾಮೂಹಿಕ ಆಂದೋಲನಗಳನ್ನು ತಡೆಗಟ್ಟಲು ಕರಡು ರಚನೆ ಮಾಡುವುದೇ ಇದರ ಮೂಲ ಗುರಿಯಾಗಿದೆ. 

 

ಈ ಹಿಂದಿನ ಹಲವಾರು ಘಟನೆಗಳಲ್ಲಿ ವಿದೇಶ ಅಥವಾ ಇನ್ನಿತರ ರೀತಿಯ ಫಂಡಿಂಗ್ ಗಲಭೆಕೊರರಿಗೆ ದೊರಕಿರುವ ಬಗ್ಗೆ ಸಾಬೀತಾಗಿತ್ತು. ಭಾರತವನ್ನು ರಕ್ಷಿಸಲು ನಿರ್ಣಾಯಕ ಹೆಜ್ಜೆ ಎಂದು ಭಾರತೀಯರು ಅಭಿಪ್ರಾಯ ಪಟ್ಟಿದ್ದಾರೆ.