ಹೊಸ ಜಿಎಸ್‌ಟಿ ಅನುಷ್ಠಾನಕ್ಕೆ ಬಂದ ದಿನವೇ, ಭಾರತದಲ್ಲಿ ಅತಿ ಹೆಚ್ಚು ಜನ ಬಳಸುವ ವಾಹನ ಬ್ರಾಂಡ್ ಮಾರುತಿ ಸುಜುಕಿ ತನ್ನ ದಾಖಲೆಯ ಗುರಿಯನ್ನು ತಲುಪಿದೆ.
ಮಾರುತಿ ಸುಜುಕಿ ತನ್ನ 35 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಅತಿ ಹೆಚ್ಚು ಕಾರುಗಳನ್ನು ವಿತರಿಸಿದೆ.
ಜಿಎಸ್‌ಟಿ 2.0 ಜಾರಿಗೆ ಬಂದ ದಿನ ಮತ್ತು ನವರಾತ್ರಿ ಆರಂಭದ ಮೊದಲ ದಿನ, ಕಂಪನಿಯು ಸುಮಾರು 30,000 ಕಾರುಗಳನ್ನು ಮಾರಾಟ ಮಾಡಿದೆ.
ಸೆಪ್ಟೆಂಬರ್ 18ರಿಂದ ಇದುವರೆಗೆ 80,000ಕ್ಕೂ ಹೆಚ್ಚು ಗ್ರಾಹಕರು ವಿಚಾರಣೆ ನಡೆಸಿದ್ದು, ಪ್ರತಿದಿನ ಸರಾಸರಿ 15,000ಕ್ಕೂ ಹೆಚ್ಚು ಬುಕಿಂಗ್‌ಗಳು ನಡೆದಿವೆ ಎಂದು ತಿಳಿದು ಬಂದಿದೆ.
ಇದಕ್ಕೆ ಸಮಾನವಾಗಿ, ಹುಂಡೈ ಕೂಡ 11,000ಕ್ಕೂ ಹೆಚ್ಚು ಕಾರುಗಳನ್ನು ಡೀಲರ್‌ಗಳ ಮೂಲಕ ಮಾರಾಟ ಮಾಡಿ, ಕಳೆದ ಐದು ವರ್ಷಗಳಲ್ಲಿ ತನ್ನ ಅತ್ಯಂತ ದೊಡ್ಡ ಸಾಧನೆಯನ್ನು ದಾಖಲಿಸಿದೆ.
ಜಿಎಸ್‌ಟಿ 2.0 ಅಡಿಯಲ್ಲಿ ವಾಹನಗಳ ಖರೀದಿಗೆ ಜಿಎಸ್‌ಟಿ ಶೇಕಡಾವಾರು ಇಳಿಕೆಯಾದ ಕಾರಣ, ಗ್ರಾಹಕರು ಹೆಚ್ಚಿನ ಲಾಭ ಪಡೆಯುತ್ತಿರುವುದು ಈ ಭಾರಿ ಮಾರಾಟಕ್ಕೆ ಕಾರಣವೆಂದು ತಜ್ಞರು ಹೇಳುತ್ತಿದ್ದಾರೆ.





