ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಸರಣಿ ವೀಡಿಯೋಗಳನ್ನು ಬಿಡುಗಡೆ ಮಾಡುತ್ತಿರುವುದರ ನಡುವೆ, ಬುರುಡೆ ಚಿನ್ನಯ್ಯನನ್ನು ನಿನ್ನೆ ಮತ್ತೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಎಸ್‌ಐಟಿ ಹಾಜರುಪಡಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಳ್ತಂಗಡಿ ನ್ಯಾಯಾಲಯದಲ್ಲಿ BNSS 183 ಅಡಿಯಲ್ಲಿ ಸ್ವ-ಇಚ್ಛಾ ಹೇಳಿಕೆ ನೀಡಲು ಬಂದಿದ್ದ ಚಿನ್ನಯ್ಯ, ನ್ಯಾಯಾಧೀಶರ ಮುಂದೆ ಗಳಗಳನೆ ಕಣ್ಣೀರಿಟ್ಟಿದ್ದಾನೆ. ಹಾಗೂ ನನ್ನದೇನೂ ತಪ್ಪಿಲ್ಲ ಎಂದು ಗೋಳಾಡಿದ್ದಾನೆ. ಸುಮಾರು ಮೂರು ಗಂಟೆಗಳ ಕಾಲ ಹೇಳಿಕೆ ದಾಖಲಿಸಿದರೂ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ, ಸೆಪ್ಟೆಂಬರ್ 25ಕ್ಕೆ ಮತ್ತೆ ಹಾಜರಾಗಲು ಕೋರ್ಟ್ ಆದೇಶಿಸಿದ್ದು, ಸದ್ಯ ಚಿನ್ನಯ್ಯನನ್ನು ಶಿವಮೊಗ್ಗ ಜೈಲಿಗೆ ಅಧಿಕಾರಿಗಳು ಶಿಪ್ಟ್ ಮಾಡಿದ್ದಾರೆ.





