ಮಂಗಳೂರು: ನವರಾತ್ರಿ ವೇಳೆ ದಕ್ಷಿಣ ಕನ್ನಡ, ಮಂಗಳೂರು ಭಾಗಗಳಲ್ಲಿ ಹುಲಿ ವೇಷ ಹಾಕಿಕೊಂಡು, ದೇವಿಗೆ ತಮ್ಮ ಸೇವೆ ಸಲ್ಲಿಸುತ್ತಾರೆ.
ಈ ಬಾರಿ ಹುಲಿ ವೇಷಧಾರಿಯೊಬ್ಬರು ತಮ್ಮ ಹೊಟ್ಟೆ ಮೇಲೆ ಸೌಜನ್ಯಾಳ ಚಿತ್ರವನ್ನು ಪೇಂಟಿಂಗ್ ಮಾಡಿಸಿಕೊಂಡು ಗಮನಸೆಳೆಯುತ್ತಿದ್ದಾರೆ.
ಮಂಗಳೂರಿನಲ್ಲಿ ಇದೀಗ ಗಮನ ಸೆಳೆಯುತ್ತಿರುವ ಹುಲಿವೇಷ ಇದಾಗಿದೆ. ಮೈತುಂಬ ಗುಲಾಬಿ ಮತ್ತು ಕಂದು ಬಣ್ಣದಲ್ಲಿ ಪೇಂಟಿಂಗ್ ಮಾಡಿಸಿಕೊಂಡಿರುವ ಈ ವ್ಯಕ್ತಿ, ಸೌಜನ್ಯಾಳ ಫೋಟೋವನ್ನ ಹೊಟ್ಟೆ ಮೇಲೆ ಚಿತ್ರಿಸಿಕೊಂಡಿದ್ದಾರೆ. ಜಸ್ಟೀಸ್ ಫಾರ್ ಸೌಜನ್ಯಾ ಎಂದು ಬರೆಸಿಕೊಂಡಿದ್ದಾರೆ.





