25 October 2025 | Join group

ಕರಾವಳಿ ಜಿಲ್ಲೆಗಳಲ್ಲಿ ಅಕ್ಟೋಬರ್ ಮೊದಲ ವಾರ ತನಕ ಮಳೆ ಮುನ್ಸೂಚನೆ

  • 24 Sep 2025 12:33:49 PM

ಮೂಲ: ಕಂಪದಕೋಡಿ ವೆದರ್ ರಿಪೋರ್ಟ್ | ಪ್ರಕಟಣೆ: ಸುಧಾವಾಣಿ ವೆದರ್ ಡೆಸ್ಕ್

 

ದಕ್ಷಿಣ ಕನ್ನಡ: ನಿನ್ನೆ ವರದಿಯಾದಂತೆ, ಕರಾವಳಿ ಜಿಲ್ಲೆಗಳಲ್ಲಿ ನಿನ್ನೆ ಸಾಮಾನ್ಯ ಮಳೆ ಮುಂದುವರೆದಿತ್ತು. ಉತ್ತರ ಕನ್ನಡ ಉಡುಪಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಕುಮಟಾದಲ್ಲಿ 68mm ಅಧಿಕ ಮಳೆಯಾಗಿತ್ತು.

 

ಇವತ್ತಿನ ಮುನ್ಸೂಚನೆ ಪ್ರಕಾರ  ಕರಾವಳಿ ಜಿಲ್ಲೆಗಳಲ್ಲಿ ಮೋಡ - ಬಿಸಿಲಿನ ವಾತಾವರಣ ಇರಲಿದ್ದು  ಕಾಸರಗೋಡು ದ.ಕ ಜಿಲ್ಲೆಗಳ ಅಲ್ಲಲ್ಲಿ ಮಧ್ಯಾಹ್ನ ನಂತರ ಮತ್ತು ನಾಳೆ ಮುಂಜಾನೆ ತುಂತುರು - ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಕಾಸರಗೋಡು ಗಡಿಭಾಗಗಳಲ್ಲಿ ಸುಳ್ಯ ಪುತ್ತೂರು ತಾಲ್ಲೂಕುಗಳಲ್ಲಿ ಮಳೆ ಪ್ರಮಾಣ ಸ್ವಲ್ಪ ಜಾಸ್ತಿ ಇರಬಹುದು.

 

ಉಡುಪಿ ಉ.ಕ. ಜಿಲ್ಲೆಗಳಲ್ಲಿಯೂ ಮಧ್ಯಾಹ್ನ ನಂತರ - ರಾತ್ರಿ ಮೋಡ- ಆಗಾಗ ತುಂತುರು ಮಳೆಯ ವಾತಾವರಣ ಇರಲಿದೆ. ಒರಿಸ್ಸಾ ಕರಾವಳಿ ಸಮೀಪ ಇರುವ ಲೋ ಪ್ರೆಷರ್ ಕಾರಣದಿಂದ  ಕರಾವಳಿ ಜಿಲ್ಲೆಗಳಲ್ಲಿ  ಮೋಡದ ವಾತಾವರಣ ಇದ್ದರೂ ನಿರೀಕ್ಷೆಗಿಂತ ಕಡಿಮೆ ಮಳೆಯಾಗುತ್ತಿದ್ದು ನಾಳೆಯಿಂದ  ಮಳೆ ಪ್ರಮಾಣ ಜಾಸ್ತಿ ಆಗುವ ಸಾಧ್ಯತೆಗಳಿದ್ದು ಅಕ್ಟೋಬರ್ 2  ತನಕ ಮೋಡ - ಸಾಮಾನ್ಯ ಮಳೆ ಮುಂದುವರಿಯಲಿದೆ.