ರಾಯಚೂರು: ನಿನ್ನೆಯಷ್ಟೇ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಯವರಿಗೆ ದಕ್ಷಿಣ ಕನ್ನಡದಿಂದ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದು ಅವರನ್ನು ರಾಯಚೂರು ಜಿಲ್ಲೆಗೆ ಸ್ಥಳಂತರಗೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿತ್ತು.
ಆದರೆ ಇಂದು ರಾಯಚೂರು ಜಿಲ್ಲೆಯ ದಲಿತ ಸೇನೆ ಮತ್ತು ಸಮಾನ ಮನಸ್ಕರ ವೇದಿಕೆಯ ಅಲ್ಪ ಸ್ವಲ್ಪ ಜನ ಮಹೇಶ್ ಶೆಟ್ಟಿ ತಿಮರೋಡಿಯವರ ಆಗಮನಕ್ಕೆ ವಿರೋಧಿಸಿ ರಾಯಚೂರಿನ ಅಂಬೇಡ್ಕರ್ ವೃತ್ತದ ಬಳಿ ಬೆಳಿಗ್ಗೆ 10 ಗಂಟೆಗೆ ಪ್ರತಿಭಟನೆ ಕೈಗೊಂಡಿದ್ದಾರೆ.
ಪ್ರತಿಭಟನಕಾರರು, ‘ರಾಯಚೂರು ಜಿಲ್ಲೆಗೆ ಬೇಡ...ಬೇಡ, ಯಾವುದಾದರೂ ಕಾಡಿಗೆ ಕಳುಹಿಸಿ, ಸರ್ಕಾರಕ್ಕೆ ಮನವಿ ಎಂಬ ಪೋಸ್ಟರ್ ಹಿಡಿದು, ಪ್ರತಿಭಟನೆ ನಡೆಸಿದ್ದಾರೆ.
ಇದರಿಂದಾಗಿ, ತಿಮರೋಡಿ ಬೆಂಬಲಿಗರು ಮತ್ತು ಸೌಜನ್ಯ ಪರ ಹೋರಾಟಗಾರರು ಕೆಂಡಾಮುಂಡಲವಾಗಿದ್ದು, ಸರಕಾರದ ಮತ್ತು ಪೊಲೀಸ್ ಇಲಾಖೆಯ ಮುಂದಿನ ನಡೆಗೆ ಕಾಯುತ್ತಿದ್ದಾರೆ ಎನ್ನಲಾಗಿದೆ.





