25 October 2025 | Join group

ಹಿರಿಯ ಸಾಹಿತಿ, ಡಾ.ಎಸ್.ಎಲ್. ಭೈರಪ್ಪ ಇನ್ನಿಲ್ಲ

  • 24 Sep 2025 04:06:57 PM

ಬೆಂಗಳೂರು: ಹಿರಿಯ ಸಾಹಿತಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಎಸ್.ಎಲ್.ಭೈರಪ್ಪ(94) ಬುಧವಾರ ಅಪರಾಹ್ನ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

 

ವಂಶ ವೃಕ್ಷ, ನಾಯಿ ನೆರಳು, ಪರ್ವ, ಗೃಹಭಂಗ, ಗ್ರಹಣ, ಉತ್ತರಾಖಂಡ ಸೇರಿದಂತೆ 25 ಕಾದಂಬರಿಗಳನ್ನು ಬರೆದಿರುವ ಭೈರಪ್ಪನವರು, ಪದ್ಮಭೂಷಣ, ನಾಡೋಜ ಪ್ರಶಸ್ತಿ, ಪಂಪ ಪ್ರಶಸ್ತಿ, ಸರಸ್ವತಿ ಸಮ್ಮಾನ್ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

 

ಡಾ. ಎಸ್.ಎಲ್. ಭೈರಪ್ಪ ಒಬ್ಬ ಶ್ರೇಷ್ಠ ಸಾಹಿತಿ. ಅವರು ದಕ್ಷಿಣ ಭಾರತದ ಪ್ರಮುಖ ಭಾಷೆಯಾದ ಕನ್ನಡದ ಪ್ರಸಿದ್ಧ ಬರಹಗಾರರು. ಅವರ ಕೃತಿಗಳು 25 ವರ್ಷಗಳಿಗೂ ಹೆಚ್ಚು ಕಾಲ ಹೆಚ್ಚು ಮಾರಾಟವಾಗುತ್ತಿವೆ. ಅವರ ಕಾದಂಬರಿಗಳನ್ನು ಭಾರತದಾದ್ಯಂತ ಭಾಷೆಗಳಿಗೆ ವ್ಯಾಪಕವಾಗಿ ಅನುವಾದಿಸಲಾಗಿದೆ.