ಮೂಲ: ಕಂಪದಕೋಡಿ ವೆದರ್ ರಿಪೋರ್ಟ್ | ಪ್ರಕಟಣೆ: ಸುಧಾವಾಣಿ ವೆದರ್ ಡೆಸ್ಕ್
ನಿನ್ನೆ ತಿಳಿಸಿದಂತೆ, ಕರಾವಳಿ ಜಿಲ್ಲೆಗಳಲ್ಲಿ ರಾತ್ರಿ ಒಂದೆರಡು ಸಾಮಾನ್ಯ ಮಳೆಯಾಗಿದೆ.
ಇವತ್ತಿನ ಮುನ್ಸೂಚನೆ ಪ್ರಕಾರ ಕರಾವಳಿ ಜಿಲ್ಲೆಗಳಲ್ಲಿ ಮೋಡ - ಬಿಸಿಲಿನ ವಾತಾವರಣ ಇರಲಿದ್ದು ದ.ಕ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಮಧ್ಯಾಹ್ನಕ್ಕಿಂತ ಮೊದಲು ಸಾಮಾನ್ಯ ಮಳೆ ಮುನ್ಸೂಚನೆ ಇದೆ. ಕಾಸರಗೋಡು ಗಡಿಪ್ರದೇಶಗಳಲ್ಲಿ ಮಂಗಳೂರು - ಬಂಟ್ವಾಳ ಪುತ್ತೂರು ಸುಳ್ಯ ಬೆಳ್ತಂಗಡಿ ತಾಲ್ಲೂಕುಗಳಲ್ಲಿ 10-20mm ಸರಾಸರಿ ಮಳೆಯ ಮುನ್ಸೂಚನೆ ಇದೆ.
ಉಡುಪಿ ಉ.ಕ ಜಿಲ್ಲೆಗಳ ಘಟ್ಟಪ್ರದೇಶಗಳಲ್ಲಿ ಮತ್ತು ಕರಾವಳಿ ತೀರಗಳಲ್ಲಿಯೂ ಮಧ್ಯಾಹ್ನ - ರಾತ್ರಿ ಅಲ್ಲಲ್ಲಿ ಮಳೆ ಮುನ್ಸೂಚನೆ ಇದೆ.ಬಂಗಾಳ ಕೊಲ್ಲಿಯ ಲೋ ಪ್ರೆಷರ್ ಪ್ರಭಾವದಿಂದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಕಡಿಮೆ ಆಗಿ ಆಗಾಗ ಮಳೆಯಾಗಲಿದ್ದು ಅಕ್ಟೋಬರ್ 2 ತನಕ ಪ್ರತಿದಿನ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.





