ಚಿನ್ನ-ಬೆಳ್ಳಿ ಎಂದರೆ ಯಾರಿಗೆತಾನೆ ಇಷ್ಟವಾಗಲ್ಲ, ಎಲ್ಲರಿಗೆ ಇಷ್ಟವಾಗುತ್ತವೆ. ಅದರಲ್ಲೂ ಚಿನ್ನ ಖರೀದಿಸಲು ಗ್ರಾಹಕರು ಕಾಯುತ್ತಿರುತ್ತಾರೆ. ಹಣ ಹೊಂದಿಸಿ, ಸಾಲ ಮಾಡಿಯಾದರೂ ಸರಿಯೇ ಚಿನ್ನ ಖರೀದಿಸುವ ಸಂಸ್ಕೃತಿ ಇದೆ. ಚಿನ್ನಕ್ಕೆ ಹೆಚ್ಚಿನ ಬೇಡಿಕೆ ದೇಶದಲ್ಲಿದೆ. ಆದರೆ ಇತ್ತೀಚೆಗೆ ಚಿನ್ನ ಹಾಗೂ ಬೆಳ್ಳಿ ಎರಡು ದರಗಳು ಪೈಪೋಟಿ ರೀತಿಯಲ್ಲಿ ಹೆಚ್ಚಾಗುತ್ತಿವೆ. ಈ ಬೆಲೆ ಏರಿಕೆ ಆಘಾತದಿಂದ ಜನರು ಕಂಗಾಲಾಗಿದ್ದಾರೆ.
ನಿನ್ನೆ ಏರಿಕೆ ಕಂಡಿದ್ದ ಬೆಳ್ಳಿ-ಬಂಗಾರದ ದರ ಇಂದು ಕೂಡ ಕೂಡ ಏರಿಕೆ ಕಂಡಿವೆ. ಇಂದಿನ ಬೆಲೆ ಹೀಗಿದೆ ನೋಡಿ.
ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಒಂದು ಗ್ರಾಂ) ರೂ. 10,480 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 10,500, ರೂ. 10,480, ರೂ. 10,480 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 10,495 ರೂ. ಆಗಿದೆ.
ಇನ್ನು ಹತ್ತು ಗ್ರಾಂ (10GM)18 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 85,750 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 1,04,800 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 1,14,330.
ನೂರು ಗ್ರಾಂ (100GM)18 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 8,57,500,
22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 10,48,000 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 11,43,300 ಆಗಿದೆ.
ಇಂದು ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬೆಳ್ಳಿ ದರ ರೂ. 1,39,000 ಆಗಿದೆ. ಬೆಂಗಳೂರು ನಗರದಲ್ಲಿ ಬೆಲೆಯಲ್ಲಿ ಇಳಿಕೆಯಾಗಿದೆ. ಇಂದು ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 1,405 ರೂ. 14,050 ಹಾಗೂ ರೂ. 1,40,500 ಗಳಾಗಿವೆ.





