25 October 2025 | Join group

ತಾಂತ್ರಿಕ ದೋಷದಿಂದ ಏರ್ ಇಂಡಿಯಾ ವಿಮಾನ ದಿಢೀರ್ ರದ್ದು: ಮಂಗಳೂರಲ್ಲಿ ಸಂಜೆವರೆಗೂ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಪರದಾಟ!

  • 26 Sep 2025 05:50:16 PM

ಮಂಗಳೂರು: ತಾಂತ್ರಿಕ ದೋಷದಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಪ್ರಯಾಣ ಮಂಗಳೂರಿನಲ್ಲಿ ರದ್ದಾಗಿದ್ದು, ಮಂಗಳೂರಿನಿಂದ ದುಬೈಗೆ ತೆರಳಬೇಕಾಗಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ರದ್ದಾಗಿದೆ ಎಂದು ವರದಿಯಾಗಿದೆ.

 

ಬೆಳಗ್ಗೆ 8.50ಕ್ಕೆ ಹೊರಡಬೇಕಾಗಿದ್ದದ್ದು ಒಂದು ಗಂಟೆ ತಡವಾಗಿ ಹೊರಡುತ್ತೆ ಎಂದಿದ್ರು. ಬಳಿಕ ಮಧ್ಯಾಹ್ನ 3.30ಕ್ಕೆ ಹೊರಡೋದಾಗಿ ತಿಳಿಸಿ ಮತ್ತೆ 4.30ಗೆ ಹೊರಡೋದಾಗಿ ಹೇಳಿದ್ರು, ಆ ನಂತರ ವಾಪಾಸ್ ಸಂಜೆ 6 ಗಂಟೆಯ ಸಮಯ ನೀಡಿ ಕೊನೆಗೆ ಪ್ರಯಾಣವನ್ನೇ ರದ್ದು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

 

ಆದರೆ, ಇದೀಗ ಬಹರೈನ್‌ನಿಂದ ಬರುವ ಬೇರೆ ವಿಮಾನಕ್ಕೆ ಕಳಿಸ್ತೇವೆ ಎಂದು ಹೇಳುತ್ತಿದ್ದು, ರಾತ್ರಿ ಪ್ರಯಾಣ ಬೇಡ ಎಂದು ಹೆಚ್ಚುವರಿ ಮೊತ್ತ ಭರಿಸಿ ಹಗಲಿನ ಪ್ರಯಾಣ ಬುಕ್ ಮಾಡಿದ್ದ ಪ್ರಯಾಣಿಕರು ಪರದಾಡುವಂತಾಗಿದೆ