25 October 2025 | Join group

ಬೆಳ್ತಂಗಡಿ : ಟಿಪ್ಪರ್, ಕಾರು ಢಿಕ್ಕಿ -ಓರ್ವ ಗಂಭೀರ

  • 26 Sep 2025 07:29:37 PM

ಬೆಳ್ತಂಗಡಿ: ಟಿಪ್ಪರ್ ಹಾಗೂ ಕಾರು ಢಿಕ್ಕಿಯಾಗಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದ್ದು ಲಾಯಿಲ ಗ್ರಾಮದ ಕಾಶಿಬೆಟ್ಟು ಬಳಿ ಶುಕ್ರವಾರ ನಡೆದಿದೆ.

 

ಅತೀ ವೇಗದ ಚಾಲನೆಯಿಂದಾಗಿ ಅಪಘಾತವಾಗಿರುವುದಾಗಿ ತಿಳಿದು ಬಂದಿದೆ‌.

 

ಉಜಿರೆ ಕಡೆಗೆ ಹೋಗುತ್ತಿದ್ದ ಕಾರು ಹಾಗೂ ಬೆಳ್ತಂಗಡಿ ಕಡೆಗೆ ಬರುತ್ತಿದ್ದ ಟಿಪ್ಪರ್ ನಡುವೆ ದಿಕ್ಕಿಯಾಗಿದೆ. 

 

ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಗಂಭೀರ ಗಾಯಗೊಂಡ ಚಾಲಕನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.