ಪುತ್ತೂರು: ಮದುವೆಯಾಗುವುದಾಗಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಡಿ ಎನ್ ಎ ಪರೀಕ್ಷೆ ವರದಿ ಬಂದಿದೆ. ಶ್ರೀಕೃಷ್ಣ ಜೆ ರಾವ್ ಮಗುವಿನ ಅಪ್ಪ ಎಂದು ಸಂತ್ರಸ್ತೆಯ ಮನೆಯವರಿಗೆ ಮಾಹಿತಿಯನ್ನು ತಿಳಿಸಲಾಗಿದೆ ಎಂದು ವಿಶ್ವಕರ್ಮ ಮಹಾ ಮಂಡಲದ ರಾಜ್ಯ ಅಧ್ಯಕ್ಷ ಕೆ ಪಿ ನಂಜುಂಡಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಸಮಾಜದ ಬಡ ಹೆಣ್ಣು ಮಗಳಿಗೆ ಅನ್ಯಾಯ ಆಗಿದೆ. ಹಿಂದೆ ಸೀತಾಮಾತೆಗೆ ಅಗ್ನಿ ಪರೀಕ್ಷೆ ನಡೆಯಿತು. ಇವತ್ತಿನ ಕಾಲದಲ್ಲಿ 'ಡಿ ಎನ್ ಎ' ಪರೀಕ್ಷೆಯೇ ಅಂತಿಮವಾಗಿದೆ. ಹಾಗಾಗಿ ಎಲ್ಲಾ ವಿಚಾರಕ್ಕೂ 'ಡಿ ಎನ್ ಎ' ಪರೀಕ್ಷೆ ಅಂತಿಮವಾಗಿದ್ದು, ಪರೀಕ್ಷೆ ವರದಿ ಬಂದಿದೆ. ಈಗಾಗಲೇ ಕೋರ್ಟ್ ಗೆ ಹೋಗಿದೆ ಎಂದವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಸಂತ್ರಸ್ತೆ, ಆಕೆಯ ತಾಯಿ ನಮಿತಾ, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.





