31 January 2026 | Join group

IPL ಮೊದಲ ಪಂದ್ಯ ರದ್ದು? ಉದ್ಘಾಟನಾ ಪಂದ್ಯ ಆರ್ ಸಿ ಬಿ ಮತ್ತು ಕೆ ಕೆ ಆರ್ ಪಂದ್ಯ ರದ್ದಾಗುವ ಸಾಧ್ಯತೆ

  • 21 Mar 2025 11:17:46 PM

IPL 2025 : ಆರ್ ಸಿ ಬಿ ಮತ್ತು ಕೆ ಕೆ ಆರ್ ನಡುವೆ ನಡೆಯಲಿರುವ 18ನೇ ಐಪಿಎಲ್ ಪಂದ್ಯಾಟಕ್ಕೆ ಈಗ ಮಳೆಯ ಭೀತಿ ಎದುರಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಪಂದ್ಯ ಈಡನ್ ಗಾರ್ಡನ್ ಕೋಲ್ಕತ್ತಾದಲ್ಲಿ ನಡೆಯಲಿದ್ದು, ಭಾರತೀಯ ಹವಾಮಾನ ವರದಿ ಆ ಪ್ರದೇಶದಲ್ಲಿ "ಆರೆಂಜ್ ಅಲರ್ಟ್" ಘೋಷಣೆ ಮಾಡಿದೆ.

 

ಶನಿವಾರದ ತನಕ ಗುಡುಗು, ಮಿಂಚು ಹಾಗೂ ಬಿರುಗಾಳಿಯೊಂದಿಗೆ ಹಗುರ ಹಾಗೂ ಮಧ್ಯಮ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಭಾರತೀಯ ಹವಾಮಾನ ಮುನ್ಸೂಚನೆ ನೀಡಿರುವುದು ಐಪಿಎಲ್ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಕೋಲ್ಕತದಲ್ಲಿ ಮಳೆ ಬಂದಿರುವುದರಿಂದ  ಶುಕ್ರವಾರದ ಅಭ್ಯಾಸ ಪಂದ್ಯವನ್ನು ರದ್ದುಗೊಳಿಸಲಾಗಿತ್ತು.

 

ಶನಿವಾರ ಐಪಿಎಲ್ ನ ಉದ್ಘಾಟನಾ ಪಂದ್ಯದ ದಿವಸ ಗರಿಷ್ಠ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ. ಒಂದು ವೇಳೆ ಮಳೆಯ ಪ್ರಮಾಣ ಜಾಸ್ತಿಯಾದರೆ ಪಂದ್ಯ ರದ್ದಾಗುವ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳಲಿದೆ.

 

ಈಗಾಗಲೇ ಈಡನ್ ಗಾರ್ಡನ್ಸ್ ಸ್ಟೇಡಿಯಂ ಸುತ್ತಮುತ್ತ ಭಾರೀ ಮೋಡ ಕವಿದಿದ್ದು, ಗುರುವಾರ ಮುನ್ನಚ್ಚರಿಕೆಯ ಕ್ರಮವಾಗಿ ಮೈದಾನದ ಸಿಬ್ಬಂದಿ ಆಡುವ ಪ್ರದೇಶದಲ್ಲಿ ಹೊದಿಕೆಗಳನ್ನು ಹಾಸಿದ್ದಾರೆ. ಬಹಳ ಕಾತರದಿಂದ ಕಾಯುತ್ತಿದ್ದ ಆರ್ ಸಿ ಬಿ ಅಭಿಮಾನಿಗಳಿಗೆ ನಿರಾಶೆಯಾಗುವ ಸಾಧ್ಯತೆ ಜಾಸ್ತಿ ಇದೆ. ಒಂದು ವೇಳೆ ಮ್ಯಾಚ್ ರದ್ದಾದರೆ ಉಭಯ ತಂಡಗಳಿಗೆ ತಲಾ ಒಂದು ಅಂಕ ಸಿಗಲಿದೆ.

 

ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಬಹಳ ಕುತೂಹಲದಿಂದ ತಮ್ಮ ನೆಚ್ಚಿನ ತಂಡದ ಮೊದಲ ಪಂದ್ಯವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ.