25 October 2025 | Join group

ರೌಡಿ ಶೀಟರ್ ಮತ್ತು ಎಕೆಎಂಎಸ್ ಬಸ್ ಮಾಲೀಕ ಆತ್ರಾಡಿ ನಿವಾಸಿ ಸೈಪುದ್ದೀನ್ ಭೀಕರ ಹತ್ಯೆ!

  • 27 Sep 2025 01:34:38 PM

ಉಡುಪಿ: ರೌಡಿ ಶೀಟರ್ ಮತ್ತು ಎಕೆಎಂಎಸ್ ಬಸ್ ಮಾಲೀಕ ಆತ್ರಾಡಿ ನಿವಾಸಿ ಸೈಪುದ್ದೀನ್ ಎಂಬಾತನನ್ನು ದುಷ್ಕರ್ಮಿಗಳ ತಂಡವು ಭೀಕರವಾಗಿ ಹತ್ಯೆಗೈದ ಘಟನೆ ಮಲ್ಪೆ ಕೊಡವೂರಿನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.

 

ಸೆಪ್ಟೆಂಬರ್ 27 ರ ಶನಿವಾರ ಮಲ್ಪೆಯಲ್ಲಿ ಗುಂಡಿಕ್ಕಿ ಆತನನ್ನು ಕೊಲ್ಲಲಾಗಿದೆ. ಹಲವು ಬಾರಿ ಗುಂಡು ಹಾರಿಸಿದ ದುಷ್ಕರ್ಮಿಗಳು, ನಂತರ ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

 

ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.