24 October 2025 | Join group

ಮಂಗಳೂರು :12 ಕೆಜಿ ಗಾಂಜಾ ವಶ - 11 ವಿದ್ಯಾರ್ಥಿಗಳ ಬಂಧನ

  • 27 Sep 2025 07:00:53 PM

ಮಂಗಳೂರು: ಅಪಾರ್ಟೆಂಟ್ ನಲ್ಲಿ ಗಾಂಜಾ ಶೇಖರಿಸಿಟ್ಟ ಮಾಹಿತಿ ಮೇಲೆ ದಾಳಿ ನಡೆಸಿದ ಪೊಲೀಸರು ಹನ್ನೆರಡು ಕೆಜಿ ಗಾಂಜಾ ಸಹಿತ ಹನ್ನೊಂದು ಮಂದಿ ಕಾಲೇಜು ವಿದ್ಯಾರ್ಥಿಗಳನ್ನು ಬಂಧಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

 

ಬಂಧಿತರನ್ನು ಕೇರಳ ಮೂಲದ ಅದೈತ್ ಶ್ರೀಕಾಂತ್, ಮುಹಮ್ಮದ್ ಅಪ್ಪಿನ್, ಮುಹಮ್ಮದ್ ಸ್ವಾನೀದ್, ನಿಬಿನ್ ಟಿ ಕುರಿಯನ್, ಮುಹಮ್ಮದ್ ಕೆ.ಕೆ, ಮುಹಮ್ಮದ್ ಹನಾನ್, ಮುಹಮ್ಮದ್ ಶಾಮಿಲ್, ಅರುಣ್ ತೋಮಸ್, ಮುಹಮ್ಮದ್ ನಿಹಾಲ್. ಸಿ, ಮೊಹಮ್ಮದ್ ಜಾಸೀಲ್ ವಿ, ಸಿದಾನ್.ಪಿ ಎನ್ನಲಾಗಿದೆ.

 

ಬಂಧಿತರೆಲ್ಲರೂ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ. ಮಂಗಳೂರು ನಗರ ಅತ್ತಾವರ ಕಾಪ್ರಿಗುಡ್ಡೆ ಮಸೀದಿ ಬಳಿ ಇರುವ ಅಪಾರ್ಟೆಂಟ್ ನಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಎಲ್ಲಿಂದಲೋ ಖರೀದಿಸಿ ತಂದು ಶೇಖರಿಸಿಟ್ಟಿರುವ ಮಾಹಿತಿಯ ಮೇರೆಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶೀತಲ್ ಅಲಗೂರು ಅವರು ಸಿಬ್ಬಂದಿಗಳ ಜೊತೆ ಕಾರ್ಯಾಚರಣೆ ನಡೆಸಿ ಮಂಗಳೂರು ನಗರದ ಅತ್ತಾವರ ಕಾಫ್ರಿಗುಡ್ಡೆಯಲ್ಲಿರುವ ಅಪಾರ್ಟಮೆಂಟ್ ಮೇಲೆ ದಾಳಿ ನಡೆಸಿದ್ದಾರೆ ಈ ವೇಳೆ ಕೊಠಡಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಸುಮಾರು 12 ಕೆ.ಜಿ 264 ಗ್ರಾಮ್ ಗಾಂಜಾ ಪತ್ತೆಯಾಗಿದ್ದು ಇದನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಇದರಲ್ಲಿ ಭಾಗಿಯಾಗಿದ್ದ ಹನ್ನೊಂದು ಮಂದಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.