24 October 2025 | Join group

ನಟ ವಿಜಯ್ ರ್ಯಾಲಿಯಲ್ಲಿ ಕಾಲ್ತುಳಿತದಲ್ಲಿ 29 ಮಂದಿ ಸಾವು, ಹಲವು ಜನ ಗಂಭೀರ

  • 27 Sep 2025 09:25:59 PM

ಚೆನ್ನೈ: ತಮಿಳುನಾಡಿನಲ್ಲಿ ನಟ ವಿಜಯ್ ರ್ಯಾಲಿಯಲ್ಲಿ ಭಾರಿ ಕಾಲ್ತುಳಿತ ಉಂಟಾಗಿದೆ. ತಮಿಳಿಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ ಹಾಗೂ ನಟ ವಿಜಯ್ ಅವರು ಕರೂರಿನಲ್ಲಿ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ 29ಕ್ಕೂ ಅಧಿಮ ಮಂದಿ ಸಾವನ್ನಪ್ಪಿದ್ದಾರೆ.

 

ತಮಿಳುನಾಡಿನ ಕರೂರಿನಲ್ಲಿ ರ್ಯಾಲಿ ನಡೆಯುವಾಗ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ವೇಳೆ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಸಾವಿನ ಸಂಖ್ಯೆ ಭಾರೀ ಏರಿಕೆಯಾಗುವ ಸಾಧ್ಯತೆ ಇದೆ.

 

ಗಾಯಗೊಂಡವರು, ಅಸ್ವಸ್ಥರು, ಪ್ರಜ್ಞಾಹೀನರಾದವರನ್ನು ಆಸ್ಪತ್ರೆಗೆ ಸಾಗಿಸಲು ಹರಸಾಹಸ ನಡೆಸಲಾಗಿದೆ. ಸಿಎಂ ಸ್ಟಾಲಿನ್ ಕೂಡಲೇ ಅಗತ್ಯ ಕ್ರಮಕ್ಕೆ ಸೂಚನೆ ನೀಡಿದ್ದಾರೆ.