ಕರೂರ್, ತಮಿಳುನಾಡು:ನಿನ್ನೆ ಸಂಜೆ ವಿಜಯ್ ಅವರ ಕರೂರ್ ರ್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಸಾವಿನ ಸಂಖ್ಯೆ 40 ಕ್ಕೆ ಏರಿದೆ. ಮೃತಪಟ್ಟವರಲ್ಲಿ 10 ಮಕ್ಕಳು ಮತ್ತು 17 ಮಹಿಳೆಯರು ಸೇರಿದ್ದಾರೆ. ಸುಮಾರು 100 ಮಂದಿ ಗಾಯಗೊಂಡಿದ್ದು, ಅನೇಕರ ಸ್ಥಿತಿ ಗಂಭೀರವಾಗಿದೆ.
ಸಂತ್ರಸ್ತರ ಕುಟುಂಬಗಳಿಗೆ ತಲಾ ₹20 ಲಕ್ಷ ಪರಿಹಾರ ಹಾಗೂ ಗಾಯಾಳುಗಳಿಗೆ ₹2 ಲಕ್ಷ ನೆರವು ಘೋಷಿಸಲಾಗಿದೆ. ಆದರೆ ದುರಂತದ ಬಳಿಕ ನಟ-ರಾಜಕಾರಣಿ ವಿಜಯ್ ತಕ್ಷಣ ಸ್ಥಳಕ್ಕೆ ತೆರಳದೆ, ಮೊದಲು ಚೆನ್ನೈಗೆ ಹಿಂತಿರುಗಿದ ಹಿನ್ನೆಲೆಯಲ್ಲಿ ಟೀಕೆಗಳು ಹೆಚ್ಚಾಗಿವೆ.
ಟಿವಿಕೆ ಪಕ್ಷದ ಹ್ಯಾಂಡಲ್‌ಗಳು ವಿಜಯ್ ಮಧ್ಯಾಹ್ನ 12 ಗಂಟೆಗೆ ಸ್ಥಳಕ್ಕೆ ಬರುತ್ತಾರೆ ಎಂದು ಘೋಷಿಸಿದರೂ, ಅವರು ಸಂಜೆ 7:30 ಕ್ಕೆ ಮಾತ್ರ ಆಗಮಿಸಿದರು. ಈ ನಡುವೆ ಸಾವಿರಾರು ಜನರು ಬಿಸಿಲಿನಲ್ಲಿ ಗಂಟೆಗಟ್ಟಲೆ ನೀರಿಲ್ಲದೆ, ಸ್ಥಳವಿಲ್ಲದೆ ನಿಂತಿದ್ದರು.
ಈ ದುರಂತದ ಆಘಾತಕಾರಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಜನಮನಸ್ಸು ತಲ್ಲಣಗೊಳಿಸಿದೆ.





