24 October 2025 | Join group

ಅಕ್ಟೋಬರ್ 5ರ ತನಕ ಕರಾವಳಿಯ ಅಲ್ಲಲ್ಲಿ ಒಂದೆರಡು ಮಳೆ ಮುಂದುವರಿಕೆ

  • 29 Sep 2025 03:11:48 PM

ಮೂಲ: ಕಂಪದಕೋಡಿ ವೆದರ್ ರಿಪೋರ್ಟ್ | ಪ್ರಕಟಣೆ: ಸುಧಾವಾಣಿ ವೆದರ್ ಡೆಸ್ಕ್

 

ಕರಾವಳಿ ಮಲೆನಾಡು ಜಿಲ್ಲೆಗಳ ಅಲ್ಲಲ್ಲಿ ನಿನ್ನೆ ಉತ್ತಮ ಮಳೆಯಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದ್ದು ಹೊನ್ನಾವರ ತಾಲೂಕಿನ ಕೊಡಾಣಿಯಲ್ಲಿ 153.5mm ರಾಜ್ಯದಲ್ಲಿಯೇ ಗರಿಷ್ಠ ಮಳೆಯಾಗಿದೆ.

 

ಇವತ್ತಿನ ಮುನ್ಸೂಚನೆ ಪ್ರಕಾರ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಬರಲಿದ್ದು ನಿರಂತರ ಬರುತ್ತಿದ್ದ ಮಳೆ ಕಡಿಮೆ ಆಗಲು ಆರಂಭವಾಗಿದೆ. ಕಾಸರಗೋಡು ದ.ಕ. ಉಡುಪಿ ಉ.ಕ ಜಿಲ್ಲೆಗಳಲ್ಲಿ ಸಣ್ಣ ಸಣ್ಣ ಮೋಡಗಳಲ್ಲಿ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ. 4 ಜಿಲ್ಲೆಗಳ ಕರಾವಳಿ ತೀರದ ತಾಲೂಕುಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇರಲಿದ್ದು ಒಂದೆರಡು ಮಳೆ ಬರಬಹುದು. ಉ.ಕ ಜಿಲ್ಲೆಯಲ್ಲಿ ಮಳೆ ಪ್ರಮಾಣ ಸ್ವಲ್ಪ ಜಾಸ್ತಿ ಇರಬಹುದು. ಅಕ್ಟೋಬರ್ 5 ತನಕ ಕರಾವಳಿಯ ಅಲ್ಲಲ್ಲಿ ಒಂದೆರಡು ಮಳೆ ಮುಂದುವರೆಯಲಿದ್ದು ನಂತರ ಮುಂಗಾರು ಗಾಳಿಯ ವೇಗ ಕಡಿಮೆ ಆಗಲು ಪ್ರಾರಂಭವಾಗಿ ಮಳೆ ಕಡಿಮೆ ಆಗಲಿದೆ.

 

ವಾಯುಭಾರಕುಸಿತವು ಅರಬ್ಬೀಸಮುದ್ರ ತಲುಪಿದ್ದು ಪಶ್ಚಿಮ ದಿಕ್ಕಿನಲ್ಲಿ ಮುಂದುವರೆಯಲಿದೆ. ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಆರಂಭವಾಗಿದ್ದು ವಾಯುಭಾರಕುಸಿತವು ಅಕ್ಟೋಬರ್ 3/4ಕ್ಕೆ ಒರಿಸ್ಸಾ ಮೂಲಕ ಚಲಿಸಬಹುದು. ನಂತರ ಭಾರತದ ಪಶ್ಚಿಮ ಕರಾವಳಿಯಲ್ಲಿ ಮಳೆ ಕಡಿಮೆ ಆಗಬಹುದು.