24 October 2025 | Join group

ವಿಟ್ಲ: ಇಂಟರ್ ಲಾಕ್ ಘಟಕಕ್ಕೆ ಅಕ್ರಮ ಪ್ರವೇಶಿಸಿ ಸಿಸಿ ಕ್ಯಾಮಾರ ಹಾನಿ- ಇಬ್ಬರು ಅಪ್ರಾಪ್ತ ಬಾಲಕರು ವಶಕ್ಕೆ

  • 30 Sep 2025 03:00:45 PM

ವಿಟ್ಲ: ಇಬ್ಬರು ಅಪ್ರಾಪ್ತ ಬಾಲಕರು ಖಾಸಗಿ ಸ್ಥಳದಲ್ಲಿದ್ದ ಇಂಟರ್ ಲಾಕ್ ಸ್ಥಳಕ್ಕೆ ಹೋಗಿ ಸಿಸಿ ಕ್ಯಾಮಾರವನ್ನು ಹಾನಿ ಮಾಡಿ, ದೇವರ ಫೋಟೋ ಮತ್ತು ಸಿಸಿ ಕ್ಯಾಮರಾದ ಡಿವಿಆರ್ ಅನ್ನು ಸುಟ್ಟು ಹಾಕಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಪುಣಚ ಗ್ರಾಮದ ಪಾಲಸ್ತಡ್ಕ ನಿವಾಸಿ ಆನಂದಗೌಡ ಎಂಬವರ ಪತ್ನಿ ಹೆಸರಿನಲ್ಲಿ ಪಿ ಬಿ ಇಂಡಸ್ಟ್ರೀಸ್‌ ಇಂಟರ್‌ ಲಾಕ್‌ ಘಟಕವನ್ನು ನಡೆಸುತ್ತಿದ್ದು, ಘಟಕಕ್ಕೆ ಸಿಸಿ ಕ್ಯಾಮಾರವನ್ನು ಅಳವಡಿಸಿದ್ದರು. ಇಂಟರ್‌ ಲಾಕ್‌ ಘಟಕವನ್ನು ಪರೀಶಿಲಿಸಿ ನಂತರ 6.00 ಗಂಟೆಗೆ ಇಂಟರ್‌ ಲಾಕ್‌ ಘಟಕಕ್ಕೆ ಹೋದಾಗ ಯಾರೋ ಘಟಕದ ಬಾಗಿಲನ್ನು ಮುರಿದು ಇಂಟರ್‌ ಲಾಕ್‌ ಘಟಕಕ್ಕೆ ಅಕ್ರಮ ಪ್ರವೇಶ ಮಾಡಿ ಅಳವಡಿಸಿದ್ದ 2 ಸಿಸಿ ಕ್ಯಾಮಾರಗಳನ್ನು, ತುಂಡರಿಸಿದ್ದಲ್ಲದೇ, ಸಿಸಿ ಕ್ಯಾಮಾರದ ಡಿವಿಆರ್‌ ನ್ನು ಮತ್ತು ದೇವರ ಪೋಟೋವನ್ನು ನೆಲದ ಮೇಲೆ ಸುಟ್ಟು ಹಾಕಿರುವುದು ಕಂಡು ಬಂದಿರುತ್ತದೆ ಎಂದು ಆನಂದ ಗೌಡ ಅವರು ದೂರು ನೀಡಿದ್ದಾರೆ.

 

ದೂರಿನ ಪ್ರಕಾರ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಠಾಣಾ ಅ.ಕ್ರ 135/2025 ಕಲಂ:329(3) , 326,299 BNS 2023 ರಂತೆ ಪ್ರಕರಣದ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಡಿವಿಆರ್ ಸುಟ್ಟು ಹೋಗಿದ್ದರೂ ಮಾಲೀಕರ ಮೊಬೈಲ್‌ಗೆ ಸಿಸಿಟಿವಿ ಸಂಪರ್ಕ ಇದ್ದುದರಿಂದ ಕೃತ್ಯವೆಸಗಿದ ಇಬ್ಬರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದು ಪೋಷಕರ ಸಮಕ್ಷಮ ವಿಚಾರಣೆ ನಡೆಸಿದಾಗ ಅವರು ತಪ್ಪು ಒಪ್ಪಿಕೊಂಡಿದ್ದಾರೆ.

 

ಇಬ್ಬರು ಬಾಲಕರನ್ನು ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.