ನವದೆಹಲಿ: ಭಾರತದ ಕ್ರಿಕೆಟ್ ತಂಡ ಪಾಕಿಸ್ತಾನದ ವಿರುದ್ಧ ಏಷ್ಯಾ ಕಪ್ ಜಯಗಳಿಸಿದ ನಂತರ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಬಿಜೆಪಿ ವಿರುದ್ಧ ಹರಿಹಾಯ್ದರು.
'ಪಹಲ್ಗಾಮ್ ಘಟನೆ ಜನರ ಮನಸ್ಸಿನಿಂದ ಇನ್ನೂ ಅಳಿಸಿಲ್ಲ, ನೋವು ಹಾಗೆ ಇರುವಾಗಲೇ ಪಾಕ್ ಜೊತೆಗೆ ಕ್ರಿಕೆಟ್ ಆಡೋದು ಬೇಕಿತ್ತಾ ? ನಿಜವಾದ ದೇಶಭಕ್ತಿ ಇದ್ರೆ ಕ್ರಿಕೆಟ್ ಮಾತ್ರವಲ್ಲ ಯಾವುದೇ ಸಂಬಂಧ ಇಟ್ಟುಕೊಳ್ಳಬಾರದು ಎಂದು ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.
ಕ್ರಿಕೆಟ್ ಗೆದ್ದರೆ ಯುದ್ಧ ಗೆದ್ದಂತೆ ಆಗಿಬಿಡುತ್ತಾ? ಈ ಆಟದಲ್ಲಿ ಸಾವಿರಾರು ಕೋಟ್ಯಂತರ ವ್ಯವಹಾರ ನಡೆಯುತ್ತೆ. ಅಮಿತ್ ಷಾ ಮಗ ಜಯ್ ಷಾ ಬಿಸಿನೆಸ್ ಮಾಡೋಕೆ ಪಂದ್ಯ ಆಯೋಜಿಸಿದ್ದಾರೆ. ಇವರಿಗೆ ಕಾಂಗ್ರೆಸ್ ದೇಶಭಕ್ತಿ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.





