ಮಂಗಳೂರು: ಇನ್ಮುಂದೆ ಬೈಕ್ ನಂಬರ್ ಪ್ಲೇಟ್ ಮರೆ ಮಾಚಿದ್ರೆ ಕ್ರಿಮಿನಲ್ ಕೇಸ್ ಬೀಳುತ್ತೆ.ಟ್ರಾಫಿಕ್ ಪೊಲೀಸರು, ಎಐ ಕ್ಯಾಮೆರಾ ಮತ್ತು ಸಿಗ್ನಲ್ಗಳ ಕಣ್ತಪ್ಪಿಸಲು ಬೈಕ್ ಸವಾರರು ನಾನಾ ಕಸರತ್ತು ನಡೆಸುತ್ತಾರೆ.
ಬೈಕ್ ನಂಬರ್ ಪ್ಲೇಟ್ ಮರೆಮಾಚುವುದರಿಂದ ಟ್ರಾಫಿಕ್ ಪೊಲೀಸರಿಗೆ ಬೈಕ್ ಮಾಹಿತಿ ಸಿಗುವುದಿಲ್ಲ. ಎಐ ಕ್ಯಾಮೆರಾಗೆ ಬೈಕ್ ಪತ್ತೆಯಾಗುವುದಿಲ್ಲ. ಹೀಗಾಗಿ ಕೇಸ್ ದಾಖಲು ಮಾಡುವುದು ಕೂಡ ಕಷ್ಟವಾಗುತ್ತೆ. ಆದ್ದರಿಂದ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ವಂಚನೆಯಡಿ ಕೇಸ್ ದಾಖಲಿಸುತ್ತಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ ಆಗಿದ್ದರೂ ರೆಕಾರ್ಡ್ ಆಗಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದ್ದು, ಇದು ಉದ್ದೇಶ ಪೂರಕವಾಗಿಯೇ ಹೀಗೆ ಮಾಡಲಾಗುತ್ತಿದ್ದೆ ಎನ್ನಲಾಗುತ್ತಿದ್ದು, ಯಾವ ಪೊಲೀಸ್ ಅಧಿಕಾರಿ ವಾಹನವನ್ನು ತಡೆದು ಪರಿಶೀಲನೆ ಮಾಡುತ್ತಾರೋ ಅವರಿಂದಲೇ ದೂರು ಪಡೆದು ಪ್ರಕರಣ ದಾಖಲಿಸಲಾಗುತ್ತಿದೆ. ಈಗಾಗಲೇ 43 ವಾಹನ ಸವಾರರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.





