24 October 2025 | Join group

ಇಂದು ಮಂಗಳೂರು ದಸರಾ ಮೆರವಣಿಗೆ: ಮಾರ್ಗ ಹಾಗೂ ಟ್ರಾಫಿಕ್ ಮಾರ್ಗಸೂಚಿ ನಿಮ್ಮ ಗಮನಕ್ಕೆ

  • 02 Oct 2025 09:57:51 AM

ಮಂಗಳೂರು: ನಗರದ ಕುದ್ರೋಳಿಯ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಪ್ರಸಿದ್ಧ 'ಮಂಗಳೂರು ದಸರಾ' ಮಹೋತ್ಸವ ಇಂದು(ಅಕ್ಟೋಬರ್ 2) ಸಂಜೆ 4 ರಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಮಂಗಳೂರು ನಗರದಲ್ಲಿ ನೆರವೇರಲಿದೆ.

 

ಈ ಪ್ರಯುಕ್ತ, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ದೇವರ ಮೆರವಣಿಗೆ ಮತ್ತು ಟ್ಯಾಬ್ಲೋಗಳು ಕುದ್ರೋಳಿ ದೇವಸ್ಥಾನದ ದ್ವಾರ, ದುರ್ಗಾಮಹಲ್ ಜಂಕ್ಷನ್, ಮಣ್ಣಗುಡ್ಡೆ ಜಂಕ್ಷನ್, ನಾರಾಯಣಗುರು ವೃತ್ತ, ಲಾಲ್‌ಭಾಗ್, ಬಳ್ಳಾಲ್ ಭಾಗ್, ಕೊಡಿಯಲ್ ಗುತ್ತು ಜಂಕ್ಷನ್, ಬಿ.ಜಿ.ಸ್ಕೂಲ್ ಜಂಕ್ಷನ್, ಪಿ. ವಿ.ಎಸ್.ಜಂಕ್ಷನ್, ನವಭಾರತ್ ವೃತ್ತ, ಬಿಷಪ್ ಹೌಸ್, ಸಿಟಿ ಸೆಂಟರ್ ಮೂಲಕ ಸಾಗಲಿದೆ. ಬಳಿಕ ಹಂಪನಕಟ್ಟೆ, ಕೆಬಿ ಕಟ್ಟೆ, ಸಾಫ್ರಾನ್ ಹೊಟೇಲ್, ಟೆಂಪಲ್ ಸ್ಕ್ವೆರ್, ಕಾರ್ ಸ್ಟ್ರೀಟ್, ಬಾಲಾಜಿ ಜಂಕ್ಷನ್, ನ್ಯೂಚಿತ್ರಾ ಜಂಕ್ಷನ್, ಅಳಕೆ ಬ್ರಿಡ್ಜ್ ತೆರಳಿ ಅಲ್ಲಿಂದ ಕುದ್ರೋಳಿ ದ್ವಾರದ ಮೂಲಕ ದೇವಸ್ಥಾನಕ್ಕೆ ಆಗಮಿಸಲಿದೆ.

 

ಈ ಹಿನ್ನಲೆಯಲ್ಲಿ ನಗರದಾದ್ಯಂತ ಮುಖ್ಯವಾಗಿ ಮೆರವಣಿಗೆ ಚಲಿಸುವ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಹೆಚ್ಚಿರುವುದರಿಂದ, ಯಾವುದೇ ಟ್ರಾಫಿಕ್ ಸಮಸ್ಯೆ ಉಂಟಾಗದಂತೆ ಸಂಚಾರಿ ಪೊಲೀಸರು ಸೂಕ್ತ ಬಂದೋಬಸ್ತ್‌ ಏರ್ಪಡಿಸಿದ್ದಾರೆ. ಅಲ್ಲದೆ ಮೆರವಣಿಗೆ ಸಾಗುವ ಇಕ್ಕೆಲಗಳಲ್ಲಿ ವಾಹನಗಳನ್ನು ಪಾರ್ಕ್‌ ಮಾಡದಂತೆ ಸೂಚನೆ ನೀಡಿದ್ದಾರೆ.

 

ಸಾರ್ವಜನಿಕರು ಮೇಲೆ ನಮೂದಿಸಿದ ಸದ್ರಿ ಮಾರ್ಗವನ್ನು ಉಪಯೋಗಿಸದೆ, ಪರ್ಯಾಯ ಮಾರ್ಗಗಳನ್ನು ಅನುಸರಿಸಲು ಮತ್ತು ಮೆರವಣಿಗೆ ಸಾಗುವ ಸದರಿ ರಸ್ತೆಯ ಬದಿಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡದಂತೆ ತಿಳಿಸಲಾಗಿದೆ.