ನೈಜೀರಿಯಾ: ದಕ್ಷಿಣ ನೈಜೀರಿಯಾದ ಕೋಗಿ ರಾಜ್ಯದ ನೈಜರ್ ನದಿಯಲ್ಲಿ ದೋಣಿ ಮುಳುಗಿ 26 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಇಬಾಜಿಯಿಂದ ವ್ಯಾಪಾರಿಗಳನ್ನು ಎಡೋ ರಾಜ್ಯದ ಇಲುಶಿಯಲ್ಲಿರುವ ಮಾರುಕಟ್ಟೆಗೆ ದೋಣಿ ಸಾಗಿಸುತ್ತಿದ್ದಾಗ ನದಿಯಲ್ಲಿ ಉರುಳಿಬಿದ್ದಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.





