ಒನ್ ಫೈನಾನ್ಸ್ ಮ್ಯಾಗಜೀನ್ ನಡೆಸಿದ ಇತ್ತೀಚಿನ ಸಮೀಕ್ಷೆಯ ಪ್ರಕಾರ, ಭಾರತೀಯ ಪುರುಷರ ಮೇಲೆ ವಿಚ್ಛೇದನವು ಭಾರೀ ಆರ್ಥಿಕ ಒತ್ತಡವನ್ನು ಉಂಟುಮಾಡುತ್ತಿದೆ ಎಂದು ಬಹಿರಂಗಪಡಿಸಿದೆ. ಟೈರ್-1 ಮತ್ತು ಟೈರ್-2 ಮಾದರಿಯ ದೊಡ್ಡ ನಗರಗಳಿಂದ ಪ್ರತಿಕ್ರಿಯಿಸಿದ 1,258 ಜನರಲ್ಲಿ, ಸುಮಾರು ಶೇ. 42 ರಷ್ಟು ಪುರುಷರು ಜೀವನಾಂಶ ಪಾವತಿಗಳು ಅಥವಾ ಕಾನೂನು ವೆಚ್ಚಗಳನ್ನು ಸರಿದೂಗಿಸಲು ಸಾಲ ತೆಗೆದುಕೊಳ್ಳಬೇಕಾಯಿತು ಎಂದು ಹೇಳಿದ್ದಾರೆ.
22 ರಿಂದ 54 ವರ್ಷ ವಯಸ್ಸಿನ ಜನರನ್ನು ಒಳಗೊಂಡ ಈ ಅಧ್ಯಯನವು, ವಿಚ್ಛೇದನ ಪ್ರಕ್ರಿಯೆಗಳ ಸಮಯದಲ್ಲಿ ಶೇ. 49 ರಷ್ಟು ಪುರುಷರು ₹5 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡಿದ್ದಾರೆ ಎಂದು ಕಂಡುಹಿಡಿದಿದೆ, ಇದು ಶೇ. 19 ರಷ್ಟು ಮಹಿಳೆಯರಿಗಿಂತ ಹೆಚ್ಚಾಗಿದೆ. ಆತಂಕಕಾರಿಯಾಗಿ, ಶೇ. 29 ರಷ್ಟು ಪುರುಷರು ಜೀವನಾಂಶವನ್ನು ಇತ್ಯರ್ಥಪಡಿಸಿದ ನಂತರ ಆರ್ಥಿಕವಾಗಿ ಅಸ್ಥಿರ ಪರಿಸ್ಥಿತಿ ಜಾರಿದ್ದಾರೆ ಎಂದು ವರದಿ ಮಾಡಿದ್ದಾರೆ.
ವಿಚ್ಛೇದನವು ಭಾವನಾತ್ಮಕ ಯೋಗಕ್ಷೇಮವನ್ನು ಮಾತ್ರವಲ್ಲದೆ ದೀರ್ಘಾವಧಿಯ ಆರ್ಥಿಕ ಸ್ಥಿರತೆಯ ಮೇಲೂ ಪರಿಣಾಮ ಬೀರುವುದರಿಂದ ಮಾನಸಿಕವಾಗಿ ವ್ಯಕ್ತಿಯನ್ನು ಕುಗ್ಗುವಂತೆ ಮಾಡುತ್ತಿದೆ ಎಂದು ಅಧ್ಯಯನ ತಿಳಿಸಿದೆ.





