24 October 2025 | Join group

ಕಾಂತಾರ ಚಾಪ್ಟರ್ - 1 ನೋಡಿ ದೈವಭಾವನೆ ತೋರಿದ ಪ್ರೇಕ್ಷಕ – ಬೆಂಗಳೂರಿನ ವಿಡಿಯೋ ವೈರಲ್

  • 02 Oct 2025 10:49:07 PM

ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ಅಭಿನಯದ 'ಕಾಂತಾರ ಚಾಪ್ಟರ್ 1' ಸಿನಿಮಾ ದೇಶ-ವಿದೇಶಗಳಲ್ಲಿ ಭರ್ಜರಿಯಾಗಿ ತೆರೆ ಕಂಡಿದ್ದು, ಎಲ್ಲೆಡೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

 

ತುಳುನಾಡಿನ ಆರಾಧ್ಯ ದೈವವಾದ 'ಪಂಜುರ್ಲಿ' ಕುರಿತು ಪ್ರಸ್ತಾಪವಾಗಿದ್ದ ಮೊದಲ ಭಾಗದ ನಂತರ, ಕಾಂತಾರ ಚಾಪ್ಟರ್ 1 ನಲ್ಲಿ ‘ಗುಳಿಗ’ ದೈವವನ್ನು ಹೈಲೈಟ್ ಮಾಡಲಾಗಿದೆ.

 

ಈ ನಡುವೆ ಬೆಂಗಳೂರಿನಲ್ಲಿ ನಡೆದ ಒಂದು ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚಿತ್ರಮಂದಿರದಿಂದ ಹೊರಬಂದ ಒಬ್ಬ ಪ್ರೇಕ್ಷಕನಿಗೆ ದೈವ ಬಂದಂತೆ ತೋರಿ, ಆತನು ದೈವಗಳ ಶೈಲಿಯಲ್ಲಿ ಆಡುವ ವಿಡಿಯೋ ಪ್ರೇಕ್ಷಕರ ಗಮನ ಸೆಳೆದಿದೆ. ಈ ದೃಶ್ಯವನ್ನು ಹಲವರು ಮೊಬೈಲ್‌ನಲ್ಲಿ ಸೆರೆಹಿಡಿದು ಟ್ವಿಟರ್ ಸೇರಿ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಂಡಿದ್ದಾರೆ.

బెంగళూరు లో కాంతారా సినిమా చూశాక ఆ మనిషిలో దేవుడు వచ్చాడుpic.twitter.com/234exf2hJy

— Kumar Reddy.Avula (@Kumar991957) October 2, 2025