ಬಂಟ್ವಾಳ: ಮದರಸಕ್ಕೆ ಹೋಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರಿಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮದರಸದ ಉಸ್ತಾದ್ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿರಾಜ್ ಯಾನೆ ಸಿರಾಜುದ್ದೀನ್ ಎಂಬಾತ ಆತ ಕಲಿಸುತ್ತಿದ್ದ ಮದರಸಕ್ಕೆ ಬರುತ್ತಿದ್ದ 5ನೇ ತರಗತಿಯ ಬುದ್ಧಿಮಾಂದ್ಯ ಅಪ್ರಾಪ್ತ ಹುಡುಗಿಗೆ ಲೈಂಗಿಕ ಕಿರಿಕುಳ ನೀಡಿದ್ದ. ಆಕೆ ತನ್ನ ಮನೆಯವರಲ್ಲಿ ತಿಳಿಸಿದ್ದರಾದರು, ಮನೆಯವರಿಗೆ ಕಾನೂನಿನ ತಿಳುವಳಿಕೆಯ ಕೊರತೆಯಿಂದಾಗಿ ಯಾವುದೇ ಕಂಪ್ಲೇಂಟ್ ಕೊಡದೆ ಸುಮ್ಮನಿದ್ದರು.
ಆದರೆ, ಆ ಬಾಲಕಿಯ ತಾಯಿಯನ್ನು ಪೊಲೀಸರು ಪ್ರಶ್ನಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ನಂತರ ಅಪ್ರಾಪ್ತ ಬಾಲಕಿಯ ತಾಯಿ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಕಂಪ್ಲೇಂಟ್ ರಿಜಿಸ್ಟರ್ ಮಾಡಿದ್ದಾರೆ. ಪೊಲೀಸರು ಆತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.





