ಜಮ್ಮು ಕಾಶ್ಮೀರ: ಭಾರತದ ಸ್ವಾತಂತ್ರ್ಯ ನಂತರ, 78 ವರ್ಷಗಳ ನಂತರ ಮೊತ್ತಮೊದಲು ಜಮ್ಮು-ಶ್ರೀನಗರ ಮಾರ್ಗದ ಮೂಲಕ ಅನಂತ್‌ನಾಗ್ ರೈಲು ಮೂಲಕ ವಾಣಿಜ್ಯ ಸರಕು ವಿಶೇಷವಾಗಿ ಕಾರುಗಳು ತಲುಪಿರುವುದು ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ದೊಡ್ಡ ಹೆಜ್ಜೆ ಎಂದು ಪರಿಗಣಿಸಲಾಗಿದೆ.

ಹೊಸದಾಗಿ ಪೂರ್ಣಗೊಂಡ ಜಮ್ಮು–ಶ್ರೀನಗರ ರೈಲು ಮಾರ್ಗದ ಮೂಲಕ ಈ ಕಾರುಗಳು ತಲುಪಿವೆ. ಈ ಮಾರ್ಗವು ಕಾಶ್ಮೀರವನ್ನು ಭಾರತದ ಪ್ರಮುಖ ರೈಲು ಜಾಲಕ್ಕೆ ಸಂಪೂರ್ಣವಾಗಿ ಸಂಪರ್ಕಿಸಿದೆ.

ಹರಿಯಾಣದ ಮಾನೇಸರ್‌ನಲ್ಲಿರುವ ಮಾರುತಿ ಸುಜುಕಿ ಪ್ಲಾಂಟ್ ನಿಂದ 116 ಹೊಸ ಕಾರುಗಳನ್ನು ರೈಲಿನ ಮೂಲಕ ಕಾಶ್ಮೀರದ ಅನಂತ್‌ನಾಗ್ ವರೆಗೆ ಸಾಗಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾಶ್ಮೀರಕ್ಕೆ ವಾಹನಗಳು ಮತ್ತು ಇತರ ವಸ್ತುಗಳ ಸಾರಿಗೆ ಹೆಚ್ಚು ಸುಲಭ, ಕಡಿಮೆ ವೆಚ್ಚದ ಮತ್ತು ವೇಗವಾದದ್ದು ಆಗಲಿದೆ.





