24 October 2025 | Join group

ಮಂಗಳೂರು : ಕಟೀಲು ದೇಗುಲ ಸೇವಾದರದಲ್ಲಿ ಕೊಂಚ ಇಳಿಕೆ

  • 05 Oct 2025 11:10:49 AM

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಅಕ್ಟೋಬರ್‌ 01ರಿಂದ ಹೊಸ ಸೇವಾದರ ಜಾರಿಗೆ ಬಂದಿದೆ.

 

ಸೇವಾದರ ಏರಿಕೆ ಬಗ್ಗೆ ದೇಗುಲ ಪ್ರಕಟನೆ ಕೊಟ್ಟ ಬಳಿಕ ಕೆಲವರು ದರ ಇಳಿಸುವಂತೆ ಜನಪ್ರತಿನಿಧಿಗಳು, ದೇಗುಲದ ಆಡಳಿತ ಮಂಡಳಿಗೆ ಮನವಿ ನೀಡಿದ್ದರು. ಇದರ ಪರಿಣಾಮ ಹೂವಿನ ಪೂಜೆ 200 ರೂ., ಕಾರ್ತಿಪೂಜೆ 20 ರೂ., ತೀರ್ಥಬಾಟ್ಲಿ 10 ರೂ. ಹೀಗೆ ಕೆಲವು ಸೇವೆಗಳ ಏರಿದ ದರದಲ್ಲಿ ಕೊಂಚ ಇಳಿಕೆ ಮಾಡಿ ದರ ಜಾರಿಯಾಗಿದೆ.

 

ಮಹಾನವಮಿ ಹಾಗೂ ವಿಜಯದಶಮಿಯ ಎರಡೂ ದಿನಗಳಲ್ಲಿ 1500ಕ್ಕೂ ಹೆಚ್ಚು ವಾಹನ ಪೂಜೆ, ನೂರರಷ್ಟು ಮಕ್ಕಳಿಗೆ ಅಕ್ಷರಾಭ್ಯಾಸ, 6100 ಹೂವಿನ ಪೂಜೆ, 4500 ಕುಂಕುಮಾರ್ಚನೆ ಸೇವೆಗಳಲ್ಲದೇ ಐನೂರಕ್ಕೂ ಹೆಚ್ಚು ಸೀರೆ ದೇವರಿಗೆ ಕಾಣಿಕೆಯಾಗಿ ಬಂದಿವೆ ಎಂದು ದೇವಸ್ಥಾನ ಪ್ರಕಟನೆ ತಿಳಿಸಿದೆ.