ಶಬರಿಮಲೆ: ವಿಶ್ವವಿಖ್ಯಾತ ಭಕ್ತಿ ಕ್ಷೇತ್ರವಾಗಿರುವ ಕೇರಳದ ಶಬರಿಮಲೆ ದೇವಸ್ಥಾನದ ಚಿನ್ನದ ಬಾಗಿಲು ಇದೀಗ ತಾಮ್ರದ ಬಾಗಿಲಾಗಿ ಮಾರ್ಪಟ್ಟಿದೆ ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.
1998ರಲ್ಲಿ ಉದ್ಯಮಿ ವಿಜಯ್ ಮಲ್ಯ ಶಬರಿಮಲೆ ದೇವಸ್ಥಾನಕ್ಕೆ ಚಿನ್ನದ ತಟ್ಟೆಗಳನ್ನು ದಾನ ಮಾಡಿದ್ದರು.
ಆದರೆ ಇಂದು, ಆ ಚಿನ್ನದ ತಟ್ಟೆಗಳು ತಾಮ್ರವಾಗಿವೆ ಎಂದು ಪಾಂಡಲಂ ಕೊಟ್ಟಾರಂ ನಿರ್ವಾಹಕ ಸಂಘದ ಕಾರ್ಯದರ್ಶಿ ಎಂ.ಆರ್. ಸುರೇಶ್ ವರ್ಮಾ ದೂರು ದಾಖಲಿಸಿದ್ದಾರೆ.
ಅವರು ಪೂರ್ಣ ತನಿಖೆಗೆ ಒತ್ತಾಯಿಸಿದ್ದು, “ಅಯ್ಯಪ್ಪ ದೇವರಿಗೆ ಅರ್ಪಿಸಿದ ಚಿನ್ನ ಹೇಗೆ ಕಣ್ಮರೆಯಾಯಿತು?” ಎಂದು ಪ್ರಶ್ನಿಸಿದ್ದಾರೆ.
ಅಯ್ಯಪ್ಪ ದೇವರ ಭಕ್ತರಲ್ಲಿ ತೃಪ್ತಿ ಮೂಡಿಸಲು, ಜವಾಬ್ದಾರರನ್ನು ಗುರುತಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.





