ನವದೆಹಲಿ: ಅಚ್ಚರಿಯ ನಡೆಯಲ್ಲಿ, ಜಮಿಯತ್ ಹಿಮಾಯತುಲ್ ಇಸ್ಲಾಂ ಸಂಘಟನೆಯು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು, ಆರ್‌ಎಸ್‌ಎಸ್ ಸಂಸ್ಥಾಪಕ ಡಾ. ಕೆ. ಬಿ. ಹೆಡ್ಗೆವಾರ್ ಅವರಿಗೆ "ಭಾರತ ರತ್ನ" ನೀಡಬೇಕೆಂದು ಒತ್ತಾಯಿಸಿದೆ.
ಆರ್‌ಎಸ್‌ಎಸ್ 100 ವರ್ಷಗಳನ್ನು ಪೂರೈಸಿದ್ದು, ಅಕ್ಟೋಬರ್ 1, 2025 ರಂದು ನವದೆಹಲಿಯಲ್ಲಿ ಶತಮಾನೋತ್ಸವ ಆಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಆರ್ ಎಸ್ ಎಸ್ ಸಂಘಟನೆಯ ಸೇವಾ ಕಾರ್ಯಗಳನ್ನು ಗಮನಿಸಿ ಅದರ ಸಂಸ್ಥಾಪಕರಾದ ಡಾ. ಕೆ. ಬಿ. ಹೆಡ್ಗೆವಾರ್ ಅವರಿಗೆ "ಭಾರತ ರತ್ನ" ನೀಡಬೇಕೆಂದು ಜಮಿಯತ್ ಹಿಮಾಯತುಲ್ ಇಸ್ಲಾಂ ಸಂಘಟನೆ ಒತ್ತಾಯಿಸಿದೆ.