ಯುಪಿ: ಉತ್ತರಪ್ರದೇಶದ ಗಟ್ಟಿ ಮುಟ್ಟದ, ಮಾಜಿ ಕುಸ್ತಿಪಟು ಹಾಗೂ ದಂಧೆಕೋರರ, ಕಳ್ಳರ, ಅಪರಾಧ ಎಸಗುವವರ ಸಿಂಹಸ್ವಪ್ನವಾಗಿರುವ ಎಎಸ್‌ಪಿ ಅನುಜ್ ಚೌಧರಿ ಅವರ ಎದೆಗೆ ಗುಂಡು ತಗಲಿದ ಬಗ್ಗೆ ವರದಿಯಾಗಿದೆ.
ನಿನ್ನೆ ಫಿರೋಜಾಬಾದ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಎಎಸ್‌ಪಿ ಅನುಜ್ ಚೌಧರಿ ಅವರ ಎದೆಗೆ ಗುಂಡು ತಗುಲಿತ್ತು. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಫಿರೋಜಾಬಾದ್ ಎನ್‌ಕೌಂಟರ್‌ನಲ್ಲಿ ಪೊಲೀಸರು 2 ಕೋಟಿ ದರೋಡೆ ಆರೋಪಿಗಳ ಹತ್ಯೆ ಮಾಡಿದ್ದಾರೆ. ಎನ್‌ಕೌಂಟರ್ ಸಮಯದಲ್ಲಿ, ಎಎಸ್‌ಪಿ ಅನುಜ್ ಚೌಧರಿ ಅವರ ಗುಂಡು ನಿರೋಧಕ ಜಾಕೆಟ್‌ಗೆ ಗುಂಡು ತಗುಲಿತು ಮತ್ತು ಅವರು ಗಾಯದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು.
ಬುಲೆಟ್ ಪ್ರೂಫ್ ಜಾಕೆಟ್‌ನಿಂದಾಗಿ ಒಬ್ಬ ದಕ್ಷ ಪೊಲೀಸ್ ಅಧಿಕಾರಿಯ ಜೀವ ಉಳಿದಿದೆ.