ಮಂಗಳೂರು: ದುಬೈಯಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಪ್ರಯಾಣಿಕರ ಲಗೇಜ್ ಬ್ಯಾಗ್‌ಗಳು ದುಬೈಯಲ್ಲೇ ಬಿಟ್ಟುಬಂದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.
ಪ್ರಯಾಣಿಕರು ವಿಮಾನದಿಂದ ಇಳಿದು, ತಮ್ಮ ಲಗೇಜ್ ಬರುವ ನಿರೀಕ್ಷೆಯಲ್ಲಿ ಬೆಲ್ಟ್ ಹತ್ತಿರ ಕಾಯುತ್ತಿದ್ದಾಗ, ಲಗೇಜ್‌ಗಳು ದುಬೈಯಲ್ಲೇ ಉಳಿದಿವೆ ಎಂಬ ಮಾಹಿತಿ ನೀಡಿದ ಏರ್‌ಪೋರ್ಟ್ ಸಿಬ್ಬಂದಿಗಳ ಮಾತು ಕೇಳಿ ಅವರು ಬೆರಗಾದರು.
ವಿಮಾನ ತುಂಬಿದ್ದ ಕಾರಣದಿಂದಾಗಿ ಕೆಲವು ಲಗೇಜ್‌ಗಳನ್ನು ತರಲು ಸಾಧ್ಯವಾಗಲಿಲ್ಲ. ನಾಳೆ ಬೆಳಿಗ್ಗೆ 5 ಗಂಟೆಗೆ ಬರುವ ವಿಮಾನದಲ್ಲಿ ಅವುಗಳನ್ನು ತರಲಾಗುತ್ತದೆ ಮತ್ತು ಪ್ರಯಾಣಿಕರ ಮನೆಗಳಿಗೆ ತಲುಪಿಸಲಾಗುತ್ತದೆ ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ.