24 October 2025 | Join group

ಸುಪ್ರೀಂಕೋರ್ಟ್ ಸಿಜೆಐ ಗವಾಯಿ ಮೇಲೆ ಶೂ ಎಸೆದ ವಕೀಲ..!

  • 06 Oct 2025 03:02:33 PM

ನವದೆಹಲಿ: ಇಂದು ಸುಪ್ರೀಂ ಕೋರ್ಟಿನಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂತು.

 

ಸುಪ್ರೀಂ ಕೋರ್ಟಿನ ಒಳಗಡೆ ವಿಚಾರಣೆಯ ಸಮಯದಲ್ಲಿ ಚೀಫ್ ಜಸ್ಟಿಸ್ ಆಫ್ ಇಂಡಿಯಾ ಬಿ.ಆರ್ ಗವಾಯಿ ಅವರ ಮೇಲೆ ರಾಕೇಶ್ ಕಿಶೋರ್ ಎಂಬ ವಕೀಲರು ತಮ್ಮ ಶೂ ವನ್ನು ಎಸೆಯಲು ಯತ್ನಿಸಿದ ಘಟನೆ ನಡೆದಿದೆ. 

 

ಆ ಕ್ಷಣವೇ ಭದ್ರತಾ ಪಡೆಗಳು ಮಧ್ಯಪ್ರವೇಶಿಸಿ ಅವರನ್ನು ಹೊರಗೆ ಕರೆದೊಯ್ಯುವಾಗ ರಾಕೇಶ್ ಕಿಶೋರ್ " ಭಾರತ ಸನಾತನ ಧರ್ಮಕ್ಕೆ ಅವಮಾನಿಸುವುದನ್ನು ಸಹಿಸುವುದಿಲ್ಲ" ಎಂದು ಕೂಗಿದರು. 

 

ನಂತರ ಪ್ರತಿಕ್ರಿಯಿಸಿದ ಸಿಜೆಐ ಗವಾಯಿ 'ಈ ವಿಷಯಗಳು ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ' ಎಂದು ಹೇಳಿದರು.

 

ಕೆಲ ದಿನಗಳ ಹಿಂದೆ ಮಧ್ಯಪ್ರದೇಶದ ಖಜುರಾಹೊ ವಿಷ್ಣು ಮಂದಿರ ಮರು ನಿರ್ಮಾಣದ ತೀರ್ಪುವಿನ ಸಂದರ್ಭದಲ್ಲಿ ಪಿ ಜೆ ಐ ಗವಾಯಿ ನೀಡಿದ ಹೇಳಿಕೆಯಿಂದ ಬೇಸಿತ್ತು ಈ ರೀತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. 

 

ಕೆಲವು ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಶೂ ಎಸೆದಿದ್ದಾರೆ ಎಂದರೆ ಇನ್ನು ಕೆಲವರು ಕೈಯಲ್ಲಿದ್ದ ಪೇಪರ್ ರೋಲ್ ಬಿಸಾಡಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.