24 October 2025 | Join group

ದರ್ಶನ್ - ಪವಿತ್ರ ಗೌಡ ಕೇಸ್ ದೇಶದ ಎರಡನೇ ಅಗ್ರ ಅಪರಾಧ ಪ್ರಕರಣ..!

  • 06 Oct 2025 08:24:35 PM

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಅವರ ಗ್ಯಾಂಗ್ ಈಗಾಗಲೇ ಜೈಲಿನ ಕಂಬಿ ಎಣಿಸುತ್ತಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಜೈಲು ವಾಸ ಅನುಭವಿಸುತ್ತಿದ್ದಾರೆ.

 

ಈ ಹೈ-ಪ್ರೊಫೈಲ್ ಪ್ರಕರಣ ಸಂಭವಿಸಿ ಒಂದು ವರ್ಷ ಕಳೆದರೂ ದೇಶದಾದ್ಯಂತ ಇದರ ಕುರಿತು ಚರ್ಚೆಗಳು ಇನ್ನೂ ಮುಂದುವರಿಯುತ್ತಿವೆ. ದೇಶದ ಪ್ರಮುಖ ಅಪರಾಧ ಪ್ರಕರಣಗಳ ಪಟ್ಟಿಯಲ್ಲಿ ಈ ಪ್ರಕರಣ ಎರಡನೇ ಸ್ಥಾನದಲ್ಲಿದೆ.

 

ರೇಣುಕಾ ಸ್ವಾಮಿಯವರು ಪವಿತ್ರ ಗೌಡರಿಗೆ ಸಂದೇಶ ಕಳುಹಿಸಿದ್ದರೆಂಬ ಕಾರಣಕ್ಕೆ ನಡೆದ ಈ ಕೊಲೆ, ದರ್ಶನ್ ಮತ್ತು ಪವಿತ್ರ ಗೌಡರ ಜೀವನದಲ್ಲಿ ದುರಂತವನ್ನು ತಂದಿದೆ.

 

ಕೊಲ್ಕತ್ತಾದ ಟ್ರೈನಿ ವೈದ್ಯೆಯ ಮೇಲಿನ ಅತ್ಯಾಚಾರ ಪ್ರಕರಣವು ದೇಶದ ಪ್ರಮುಖ ಪ್ರಕರಣಗಳಲ್ಲಿ ಮೊದಲ ಸ್ಥಾನ ಪಡೆದಿದೆ. ಈ ಪ್ರಕರಣದ ಮುಖ್ಯ ಆರೋಪಿ ಸಂಜೆ ರಾವತ್ ಈಗಾಗಲೇ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.