24 October 2025 | Join group

ಇದೇ ಮೊದಲ ಬಾರಿಗೆ ಲಾಟರಿ ಖರೀದಿಸಿದ ವ್ಯಕ್ತಿಗೆ ಬಂಪರ್: 25 ಕೋಟಿ ರೂ. ಬಹುಮಾನ

  • 07 Oct 2025 09:06:21 AM

ಆಲಪ್ಪುಳ: ಇದೇ ಮೊದಲ ಬಾರಿಗೆ ಲಾಟರಿ ಖರೀದಿಸಿದ್ದ ಕೇರಳ ವ್ಯಕ್ತಿಯೊಬ್ಬರಿಗೆ ಭರ್ಜರಿ 25 ಕೋಟಿ ರೂಪಾಯಿ ಬಹುಮಾನ ಬಂದಿದೆ.

 

ಕೇರಳದ ತಿರುವೋಣಂ ಬಂಪರ್ ಲಾಟರಿ ಈ ಬಾರಿ ಆಲಪ್ಪುಳ ನಿವಾಸಿ ಶರತ್ ನಾಯರ್ ಎಂಬುವರಿಗೆ ಒಲಿದಿದೆ. ಅವರು 25 ಕೋಟಿ ರೂಪಾಯಿ ಬಂಪರ್ ಬಹುಮಾನ ಪಡೆದುಕೊಂಡಿದ್ದಾರೆ.

 

ಮೊದಲ ಬಾರಿಗೆ ಶರತ್ ನಾಯರ್ ತಿರುವೋಣ ಬಂಪರ್ ಲಾಟರಿ ಖರೀದಿಸಿದ್ದರು. ಅಕ್ಟೋಬರ್ 3ರಂದು ಲಾಟರಿ ಫಲಿತಾಂಶ ಪ್ರಕಟವಾಗಿದೆ. ಇದರಲ್ಲಿ ಶರತ್ ನಾಯರ್ ಖರೀದಿಸಿದ ಲಾಟರಿ ಟಿಕೆಟ್ ಗೆ 25 ಕೋಟಿ ರೂ. ಬಂಪರ್ ಬಹುಮಾನ ಬಂದಿದೆ.

 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶರತ್ ನಾಯರ್, ಮೊದಲ ಬಾರಿಗೆ ಲಾಟರಿ ಖರೀದಿಸಿದ್ದೆ. ನಾನು ಗೆಲ್ಲುತ್ತೇನೆ ಎಂದುಕೊಂಡಿರಲಿಲ್ಲ. ಫಲಿತಾಂಶ ಬಂದ ದಿನ ಮೂರು ಬಾರಿ ಪರಿಶೀಲನೆ ನಡೆಸಿದೆ. ನಂತರ ಎಸ್‌ಬಿಐ ನಲ್ಲಿ ಹಣ ಪಡೆದುಕೊಂಡಿದ್ದಾಗಿ ತಿಳಿಸಿದ್ದಾರೆ.