24 October 2025 | Join group

ಧರ್ಮಸ್ಥಳಕ್ಕೆ ಹೋಗಿ ವೀರೇಂದ್ರ ಹೆಗ್ಗಡೆ ಬಳಿ ಕ್ಷಮೆ ಕೇಳುತ್ತೇನೆ ಎಂದ ಸುಜಾತಾ ಭಟ್

  • 07 Oct 2025 10:37:23 AM

ಬೆಂಗಳೂರು: ಬುರುಡೆ ಗ್ಯಾಂಗ್ ಹಿಂದೆ ಹೋಗಿ ನಾನು ತಪ್ಪು ಮಾಡಿದೆ. ಈಗ ಪಶ್ಚಾತ್ತಾಪವಾಗುತ್ತಿದೆ. ಧರ್ಮಸ್ಥಳಕ್ಕೆ ತೆರಳಿ ಮಂಜುನಾಥ ಸ್ವಾಮಿ ಹಾಗೂ ವಿರೇಂದ್ರ ಹೆಗ್ಗಡೆ ಬಳಿ ಕ್ಷಮೆ ಕೇಳುತ್ತೇನೆ ಎಂದು ಸುಜಾತಾ ಭಾಟ್ ತಿಳಿಸಿದ್ದಾರೆ.

 

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಜಾತಾ ಭಟ್, ಮುಂದಿನ ವಾರ ನಾನು ಧರ್ಮಸ್ಥಳಕ್ಕೆ ಹೋಗುತ್ತೇನೆ ಮಂಜುನಾಥ ಸ್ವಾಮಿ ದರ್ಶನ ಪಡೆದು ಬರಬೇಕು ಎಂದುಕೊಂಡಿದ್ದೇನೆ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಕ್ಷಮೆ ಕೇಳುತ್ತೇನೆ. ಏನೋ ಗೊತ್ತಾಗದೇ ನನ್ನಿಂದ ತಪ್ಪಾಯಿತು ಎಂದು ಕೇಳುತ್ತೇನೆ ಎಂದು ಹೇಳಿದರು.

 

ನನ್ನ 60 ವರ್ಷದ ಜೀವನದಲ್ಲಿ ಇದೊಂದು ನನಗೆ ಕಪ್ಪು ಚುಕ್ಕೆ. ಇನ್ನಾದರೂ ಏನೋ ಜೀವನವನ್ನು ಚೆನ್ನಾಗಿ ಮಾಡುವ ಆಸೆಯಿದೆ ಎಂದರು.

 

ಇದೇ ವೇಳೆ ತಮಾಷೆಗೆ ವಾಸಂತಿ ಫೋಟೋಗೆ ಬೊಟ್ಟಿಟ್ಟು ನಾನೇ ತೋರಿಸಿದ್ದೆ. ಇದು ಇಷ್ಟು ದೊಡ್ಡ ಮಟ್ಟಕ್ಕೆ ಹೋಗುತ್ತೆ ಎಂದು ನನಗೆ ಗೊತ್ತಿರಲಿಲ್ಲ. ಈಗಲಾದರೂ ನ್ಯಾಯ ಸಿಗಲಿ ಅಂತಾ ಫೋಟೋ ತೋರಿಸಿದೆ ಎಂದಿದ್ದಾರೆ.