ನವದೆಹಲಿ: ದೇಶದಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಏರುಗತಿಯಲ್ಲಿಯೇ ಮುಂದುವರಿದಿದ್ದು, ಮತ್ತೊಂದು ಸಾರ್ವಕಾಲಿಕ ದಾಖಲೆ ನಿರ್ಮಿಸಿವೆ.
ದೆಹಲಿಯಲ್ಲಿ 99.9 ಶುದ್ಧತೆಯ ಚಿನ್ನದ ಬೆಲೆಯು 10 ಗ್ರಾಂಗೆ 9700 ರೂ. ಏರಿ ದಾಖಲೆಯ 1.30 ಲಕ್ಷ ರೂ.ಗೆ ತಲುಪಿದೆ.
ಇದೇ ವೇಳೆ 10 ಗ್ರಾಂ 99.5 ಶುದ್ಧತೆ ಚಿನ್ನ 2700 ರೂ.ಗೆ ಜಿಗಿದು, 1.22 ಲಕ್ಷ ರೂ.ಗೆ ಏರಿದೆ.
ಮತ್ತೊಂದೆಡೆ ಬೆಳ್ಳಿ ಬೆಲೆಯು 7400 ರೂ. ಏರಿಕೆ ಕಂಡು, ಜೀವಮಾನದ ಗರಿಷ್ಠವಾದ ಕೇಜಿಗೆ 1.57 ಲಕ್ಷ ರೂ.ಗೆ ತಲುಪಿದೆ.
ಜಾಗತಿಕ ಚಿನ್ನದ ಬೇಡಿಕೆ ಮತ್ತು ರೂಪಾಯಿ ಸಾರ್ವಕಾಲಿಕ ಕನಿಷ್ಠಕ್ಕೆ ತಲುಪಿರುವುದು ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ.