ಕಾಸರಗೋಡು : ಜಿಲ್ಲೆಯ ಕುಂಬಳೆ ಸಮೀಪದ ಸೀತಂಗೋಳಿಯಲ್ಲಿ ನಿನ್ನೆ ರಾತ್ರಿ ಎರಡು ಗುಂಪುಗಳ ನಡುವೆ ನಡೆದ ಗ್ಯಾಂಗ್ ವಾರ್ ಭಾರೀ ಉದ್ವಿಗ್ನತೆ ಸೃಷ್ಟಿಸಿದೆ. ಹಣದ ವಿಚಾರದಿಂದ ಆರಂಭವಾದ ಜಗಳ ಹಿಂಸಾತ್ಮಕವಾಗಿ ತಿರುಗಿ, ಬದಿಯಡ್ಕ ಮೂಲದ ಅನಿಲ್ ಕುಮಾರ್ ಎಂಬ ಯುವಕನ ಕುತ್ತಿಗೆಯಲ್ಲಿ ಚಾಕು ಇರಿಸಲಾಯಿತು.
ಘಟನೆಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಸ್ಥಳಕ್ಕೆ ತಕ್ಷಣ ಕುಂಬಳೆ ಪೊಲೀಸರು ಧಾವಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ನಾಲ್ವರನ್ನು ವಶಕ್ಕೆ ತೆಗೆದುಕೊಂಡಿದ್ದು, ಕೃತ್ಯಕ್ಕೆ ಬಳಸಿದ ಎರಡು ವಾಹನಗಳನ್ನೂ ಪೊಲೀಸರು ಜಪ್ತಿ ಮಾಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಯ ಮೂಲ ಕಾರಣ ಮತ್ತು ಇತರೆ ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.