24 October 2025 | Join group

ಬೆಂಗಳೂರಿನಲ್ಲಿ ದೇವರಿಗೂ ಜಾತಿ ಸಮೀಕ್ಷೆ.? ದೇವಸ್ಥಾನಕ್ಕೆ ಸ್ಟಿಕ್ಕರ್ ಅಂಟಿಸಿದ ಗಣತಿದಾರರು.!

  • 07 Oct 2025 05:11:58 PM

ಬೆಂಗಳೂರು : ಬೆಂಗಳೂರಿನಲ್ಲಿ ಗಣತಿದಾರರು ಎಡವಟ್ಟು ಮಾಡಿದ್ದು, ದೇವಸ್ಥಾನಕ್ಕೂ ಜಾತಿ ಗಣತಿ ಸ್ಟಿಕ್ಕರ್ ಅಂಟಿಸಿದ್ದಾರೆ.

 

ಹೌದು. ಬೆಂಗಳೂರಿನ ವರದಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ಗಣತಿದಾರರು ಸ್ಟಿಕ್ಕರ್ ಅಂಟಿಸಿ ಹೋಗಿರುವ ಘಟನೆ ನಡೆದಿದೆ. ಎಸ್.ಪಿ ರಸ್ತೆಯಲ್ಲಿರುವ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ದೇಗುಲಕ್ಕೆ ಸ್ಟಿಕ್ಕರ್ ಅಂಟಿಸಿರೋದು ನಿರ್ಲಕ್ಷ್ಯ , ದೇವರಿಗೆ ಸಮೀಕ್ಷೆ ಮಾಡಲು ಮುಂದಾಗಿರಬೇಕು ಎಂದು ಅರ್ಚಕರು ಹೇಳಿದ್ದಾರೆ.

 

ಜ್ಯಾದ್ಯಂತ ಜಾತಿ ಗಣತಿ ಸಮೀಕ್ಷೆ ಗಡುವು ಅ.12 ರವರೆಗೆ ವಿಸ್ತರಣೆ ಮಾಡಲಾಗಿದ್ದು, ಆನ್ ಲೈನ್ ನಲ್ಲಿ ಕೂಡ ಸಮೀಕ್ಷೆಯಲ್ಲಿ ಭಾಗಿಯಾಗಬಹುದಾಗಿದೆ. ರಾಜ್ಯದ ಎಲ್ಲಾ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ನಿಖರವಾದ ಮಾಹಿತಿ ಸಂಗ್ರಹಿಸಲು ಈಗಾಗಲೇ ರಾಜ್ಯಾದ್ಯಂತ ಸಮೀಕ್ಷೆ ಕಾರ್ಯ ಆರಂಭಗೊಂಡಿದ್ದು, ಈ ಸಮೀಕ್ಷೆಯು ಅಕ್ಟೋಬರ್ 12 ರವರೆಗೆ ನಡೆಯಲಿದೆ.