23 October 2025 | Join group

ಮತ್ತೆ ಮಹಾ ಕಾರ್ಯಾಚರಣೆಗೆ ಇಳಿದ ಯೋಗಿ: 48 ಗಂಟೆಗಳಲ್ಲಿ 20ಕ್ಕೂ ಹೆಚ್ಚು ಎನ್‌ಕೌಂಟರ್‌ಗಳು

  • 08 Oct 2025 02:00:29 PM

ಉತ್ತರಪ್ರದೇಶ: ಬರೇಲಿ ಹಿಂಸಾಚಾರದ ನಂತರ ಉತ್ತರ ಪ್ರದೇಶ ಪೊಲೀಸರು ಮತ್ತೆ ಕಠಿಣ ಕ್ರಮಕ್ಕೆ ಇಳಿದು, ಕೇವಲ 48 ಗಂಟೆಗಳಲ್ಲಿ 20ಕ್ಕೂ ಹೆಚ್ಚು ಎನ್‌ಕೌಂಟರ್‌ಗಳನ್ನು ನಡೆಸಿದ್ದಾರೆ. “ಆಪರೇಷನ್ ಲ್ಯಾಂಗ್ಡಾ” ಮತ್ತು “ಆಪರೇಷನ್ ಖಲ್ಲಾಸ್” ಹೆಸರಿನ ಈ ದಾಳಿಯಲ್ಲಿ ಹಲವು ಅಪರಾಧಿಗಳನ್ನು ಬಂಧಿಸಲಾಗಿದ್ದು, ಕೆಲವರು ಗಾಯಗೊಂಡಿದ್ದಾರೆ.

 

2017 ರಿಂದ ರಾಜ್ಯದಲ್ಲಿ ನಡೆದ ಎನ್‌ಕೌಂಟರ್‌ಗಳ ಸಂಖ್ಯೆ ಈಗಾಗಲೇ 14,000 ದಾಟಿದ್ದು, ಸುಮಾರು 243 ಮಂದಿ ಸಾವನ್ನಪ್ಪಿ 9,500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

 

ಈ ಬಾರಿ ಯೋಗಿ ಆದಿತ್ಯನಾಥ್ ಸರ್ಕಾರ ಈ ಕ್ರಮವನ್ನು ಬರೇಲಿ ಹಿಂಸಾಚಾರಕ್ಕೆ ಪ್ರತಿಕ್ರಿಯೆಯಾಗಿ ಹಾಗೂ ರಾಜ್ಯದಲ್ಲಿ ಸಂಘಟಿತ ಅಪರಾಧಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯ ಭಾಗವಾಗಿ ಆರಂಭಿಸಿದೆ. ಅಧಿಕಾರಿಗಳ ಪ್ರಕಾರ, ಸಾರ್ವಜನಿಕ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದು ಇದರ ಮುಖ್ಯ ಉದ್ದೇಶವಾಗಿದೆ