23 October 2025 | Join group

ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿಗೆ ವಿದೇಶ ಪ್ರಯಾಣ ನಿರಾಕರಣೆ: ಮೊದಲು ₹60 ಕೋಟಿ ಪಾವತಿಸಿ, ನಂತರ ಬ್ಯಾಗ್ ಪ್ಯಾಕ್ ಮಾಡಿ ಎಂದ ಕೋರ್ಟ್!

  • 08 Oct 2025 04:10:02 PM

ಮುಂಬಯಿ: ಯೂಟ್ಯೂಬ್ ಕಾರ್ಯಕ್ರಮಕ್ಕಾಗಿ ಕೊಲಂಬೊಗೆ ಪ್ರಯಾಣಿಸಲು ಶಿಲ್ಪಾ ಶೆಟ್ಟಿ ಅವರ ಮನವಿಯನ್ನು ಬಾಂಬೆ ಹೈಕೋರ್ಟ್ ನಿರಾಕರಿಸಿದೆ. ₹60 ಕೋಟಿ ವಂಚನೆ ಪ್ರಕರಣವನ್ನು ಮೊದಲು ಇತ್ಯರ್ಥಪಡಿಸಬೇಕು ಎಂದು ತಿಳಿಸಿದೆ.

 

'ಅನುಮತಿ ಪಡೆಯುವ ಮೊದಲು ₹60 ಕೋಟಿ ಪಾವತಿಸಿ ಆಮೇಲೆ ವಿದೇಶ ಪ್ರಯಾಣ ಬಗ್ಗೆ ಯೋಚಿಸಿ' ಎಂದಿದೆ. 

 

ಈಗ ನಿಷ್ಕ್ರಿಯವಾಗಿರುವ ತಮ್ಮ ಸಂಸ್ಥೆಯಾದ 'ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್‌'ನಲ್ಲಿ ಹೂಡಿಕೆ ಮಾಡಿದ ಉದ್ಯಮಿಯೊಬ್ಬರನ್ನು ವಂಚಿಸಿದ ಆರೋಪದ ಮೇಲೆ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿರುದ್ಧ ಲುಕ್ ಔಟ್ ನೋಟೀಸ್ ಜಾರಿ ಮಾಡಲಾಗಿದೆ.

 

ಕಳೆದ ವಾರ ದಂಪತಿಗೆ ಫುಕೆಟ್‌ಗೆ ಪ್ರಯಾಣ ಕೂಡ ನಿರಾಕರಿಸಲಾಗಿತ್ತು.