ಮಂಗಳೂರು: ಮೀನು ಹಿಡಿಯಲು ಹೋದ ವ್ಯಕ್ತಿಯೋರ್ವರು ನೀರಿಗೆ ಬಿದ್ದು ಮೃತಪಟ್ಟ ಘಟನೆ ಮಂಗಳೂರಿನ ತೋಟ ಬೆಂಗ್ರೆ ಅಳಿವೆ ಬಾಗಿಲು ಬಳಿ ನಡೆದಿದೆ
ಮೃತಪಟ್ಟ ವ್ಯಕ್ತಿಯನ್ನು ಮನೋಹರ್ ಪುತ್ರನ್ (53) ಎಂದು ಗುರುತಿಸಲಾಗಿದೆ.
ಮಂಗಳವಾರ ಸಂಜೆ 6:30 ರ ವೇಳೆಗೆ ತೋಟ ಬೆಂಗ್ರೆ ಅಳಿವೆ ಬಾಗಿಲು ಬಳಿ ನದಿಯಲ್ಲಿ ಬಲೆ ಹಾಕಿ ಮೀನು ಹಿಡಿಯುತ್ತಿದ್ದಾಗ ಮನೋಹರ್ ಪುತ್ರನ್ ಅವರು ಆಕಸ್ಮಿಕವಾಗಿ ಪಲ್ಗುಣಿ ನದಿಗೆ ಜಾರಿ ಬಿದ್ದಿದ್ದಾರೆ. ಬಳಿಕ ಮೇಲಕ್ಕೆ ಬರಲಾಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.