ವಿಜಯಪುರ: ಜಿಲ್ಲೆಯ ತಿಕೋಟ ಮತ್ತು ಸುತ್ತಮುತ್ತಲಿನ ಹಲವೆಡೆ ಶುಕ್ರವಾರ ರಾತ್ರಿ ಭೂಮಿ ಕಂಪಿದ ಅನುಭವ ದಾಖಲಾಗಿದೆ. ರಾತ್ರಿ ಸುಮಾರು 10:01ರ ಸಮಯದಲ್ಲಿ ಆಕಸ್ಮಿಕವಾಗಿ ಭಾರೀ ಸದ್ದು ಕೇಳಿ, ಭೂಮಿ ಕಂಪಿದಂತೆ ಅನಿಸಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ತಿಕೋಟ, ಹೊನ್ನೂಟಗಿ, ಕವಲಗಿ, ಕಗ್ಗೋಡ, ಮಧಬಾವಿ, ದ್ಯಾಬೇರಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಂಪನದ ಅನುಭವ ಆಗಿದೆ. ಭೂಕಂಪನ ಆ್ಯಪ್‌ಗಳ ಪ್ರಕಾರ, ಕಂಪನದ ತೀವ್ರತೆ 2.8ರಷ್ಟಾಗಿದ್ದು, ವಿಜಯಪುರ ಗ್ರಾಮೀಣ ಪ್ರದೇಶದ ಸುಮಾರು 12 ಕಿ.ಮೀ ವ್ಯಾಪ್ತಿಯಲ್ಲಿ ಅದರ ಪ್ರಭಾವ ಕಂಡುಬಂದಿದೆ.
ಇದಕ್ಕೂ ಮುನ್ನ ಕಳೆದ ತಿಂಗಳು ಸಿಂದಗಿ ಭಾಗದಲ್ಲಿಯೂ ಸಣ್ಣ ಪ್ರಮಾಣದ ಭೂಮಿ ಕಂಪಿದ್ದ ಅನುಭವವಾಗಿತ್ತು. ಈ ಬಾರಿ ಮತ್ತೆ ಕಂಪನದ ಅನುಭವವಾಗುತ್ತಿದ್ದಂತೆಯೇ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.





