ಮಂಗಳೂರು: ನಗರದಲ್ಲಿ ತಂತ್ರಜ್ಞಾನ ಉದ್ಯಾನ (ಟೆಕ್ ಪಾರ್ಕ್) ಸ್ಥಾಪನೆಯಯಾಗಲಿದೆ. ಕರ್ನಾಟಕ ಸರ್ಕಾರ ಅಂಗೀಕಾರ ನೀಡಿದ್ದು, ಮಂಗಳೂರಿನ ಬ್ಲೂಬೆರ್ರಿ ಹಿಲ್ಸ್ (Blueberry Hills) ನಲ್ಲಿ ಟೆಕ್ ಪಾರ್ಕ್ ಬರಲಿದೆ.
ಸುಮಾರು 3.25 ಎಕರೆ ಭೂಮಿ ಪ್ರದೇಶದಲ್ಲಿ ಮೂರುವರೆ ಲಕ್ಷ ಚದರ ಅಡಿಯಲ್ಲಿ ಕಟ್ಟಡ ನಿರ್ಮಾಣವಾಗಲಿದೆ. ಮೂಲಗಳ ಪ್ರಕಾರ ಸುಮಾರು 4,000 ಜನರಿಗೆ ಉದ್ಯೋಗ ಸೃಷ್ಟಿಯಲಾಗಿದೆ. ಈ ಯೋಜನೆಯು 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ.
ಮಂಗಳೂರನ್ನು ಕರ್ನಾಟಕದ ಎರಡನೇ ದೊಡ್ಡ ತಂತ್ರಜ್ಞಾನ ಕೇಂದ್ರವಾಗಿ (ಟೈರ್-೨ ಟೆಕ್ ಹಬ್) ಅಭಿವೃದ್ಧಿಪಡಿಸುವುದು. ಐಟಿ, ಫಿನ್‌ಟೆಕ್, ಮ್ಯಾರಿನ್‌ಟೆಕ್ ಕಂಪನಿಗಳು ಮತ್ತು GCC (ಗ್ಲೋಬಲ್ ಕ್ಯಾಪ್ಟಿವ್ ಸೆಂಟರ್) ಹೂಡಿಕೆಗಳನ್ನು ಆಕರ್ಷಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಕರ್ನಾಟಕ ರಾಜ್ಯ ಕ್ಯಾಬಿನೆಟ್ ಅಕ್ಟೋಬರ್ 9, 2025 ರಂದು ಈ ಯೋಜನೆಗೆ ಅಂಗೀಕಾರ ನೀಡಿದೆ. ಈ ಯೋಜನೆಯಿಂದ ಮಂಗಳೂರು 'ಸಿಲಿಕಾನ್ ಬೀಚ್ ಆಫ್ ಇಂಡಿಯಾ' ಎಂದು ಕರೆಯಲ್ಪಡುವಂತಾಗುತ್ತದೆ.





