16 December 2025 | Join group

ಮಂಗಳೂರಲ್ಲಿ ಕ್ಯಾಬ್ ಚಾಲಕನಿಗೆ 'ಟೆರರಿಸ್ಟ್' ಎಂದು ನಿಂದನೆ : ಮಲಯಾಳಂ ನಟ ಜಯಕೃಷ್ಣನ್ ಅರೆಸ್ಟ್.!

  • 11 Oct 2025 03:35:50 PM

ಮಂಗಳೂರು : ಕ್ಯಾಬ್ ಚಾಲಕನಿಗೆ ಜಾತಿ ನಿಂದನೆ ಮತ್ತು ಭಯೋತ್ಪಾದಕ ಎಂದು ನಿಂದಿಸಿದ ಕೇರಳ ಚಿತ್ರರಂಗದ ನಟ ಜಯಕೃಷ್ಣನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

 

ಉರ್ವ ಠಾಣೆಯಾ ಪೊಲೀಸರು ನಟ ಜಯಕೃಷ್ಣ್ ಅವರನ್ನು ಬಂಧಿಸಿದ್ದಾರೆ. ಕ್ಯಾಬ್ ಚಾಲಕನಿಗೆ ಜಾತಿ ನಿಂದನೆ ಮತ್ತು ಭಯೋತ್ಪಾದಕ ಎಂದು ನಿಂದಿಸಿದ ನಟ ಜಯಕೃಷ್ಣ್ ಸೇರಿ ಮೂವರ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು. ಇದೀಗ ನಟ ಜಯಕೃಷ್ಣನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕ್ಯಾಬ್ ಚಾಲಕ ಶಫೀಕ್ ಅಹ್ಮದ್ ಎಂಬುವವರು ದೂರು ನೀಡಿದ್ದಾರೆ.

 

ಚಾಲಕನಿಗೆ ‘ಟೆರರಿಸ್ಟ್’ ಎಂದು ಅಪಹಾಸ್ಯ ಮಾಡಿ, ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎನ್ನಲಾಗಿದೆ. ಮಂಗಳೂರಿನ ಉರ್ವಾ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 352, 353(2) ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸಂಬಂಧ ನಟ ಜಯಕೃಷ್ಣ್, ಸಂತೋಷ್ ಅಬ್ರಾಹಂ ಮತ್ತು ವಿಮಲ್ ವಿರುದ್ಧ ಕೇಸ್ ದಾಖಲಾಗಿತ್ತು.