31 January 2026 | Join group

ಷೇರು ಟ್ರೇಡಿಂಗ್ ವಂಚನೆ : 38 ಲಕ್ಷಕ್ಕಿಂತಲೂ ಹೆಚ್ಚು ಹಣ ಕಳೆದುಕೊಂಡ ಮಂಗಳೂರಿನ ವ್ಯಕ್ತಿ!

  • 25 Mar 2025 07:30:12 PM

ಮಂಗಳೂರು : ದಿನದಿಂದ ದಿನಕ್ಕೆ ಸೈಬರ್ ಕ್ರೈಂ ಗೆ ಬಲಿಯಾಗುವವರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ದಿನದಿಂದ ದಿನಕ್ಕೆ ವಂಚಕರು ನಾನಾ ರೀತಿಯಲ್ಲಿ ಜನರನ್ನು ಮೋಸಗೊಳಿಸುತ್ತಲೇ ಇದ್ದಾರೆ. ಇದ್ದಕ್ಕೆ ಸಾಕ್ಷಿಯಾಗಿ ಇನ್ನೊಂದು ದೊಡ್ಡ ಮೊತ್ತದ ಪ್ರಕರಣ ಮಂಗಳೂರಿನಲ್ಲಿ ನಡೆದಿದೆ.

 

ಫೇಸ್ಬುಕ್ ನಲ್ಲಿ ಬಂದ ಷೇರು ಟ್ರೇಡಿಂಗ್ ಜಾಹಿರಾತಿಗೆ ಸ್ಪಂದಿಸಿ 38 ಲಕ್ಷಕ್ಕಿಂತಲೂ ಹಣ ಕಳೆದುಕೊಂಡಿರುವ ಘಟನೆ ಮಂಗಳೂರಿನ ಕಾವೂರಿನಲ್ಲಿ ನಡೆದಿದ್ದು, ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

 

ಇವರು ಫೇಸ್ ಬುಕ್ ನಲ್ಲಿ ಬಂದ ಲಿಂಕ್ ಓಪನ್ ಮಾಡಿ, ತಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸಿದ್ದರು. ನೋಂದಣಿ ಮಾಡಿದ ನಂತರ ಅಪರಿಚಿತ ವ್ಯಕ್ತಿ ಕರೆ ಮಾಡಿ 21,000 ರೂ. ವರ್ಗಾವಣೆ ಮಾಡಲು ತಿಳಿಸಿರುತ್ತಾನೆ.

 

ನಂತರದ ದಿನಗಳಲ್ಲಿ, ಟ್ರೇಡಿಂಗ್ ಕಂಪನಿ ಪ್ರತಿನಿಧಿಗಳು ತರಬೇತಿ ನೀಡುವ ಮೂಲಕ ಮತ್ತಷ್ಟು ಹೂಡಿಕೆ ಮಾಡಲು ಒತ್ತಾಯಿಸಿದ್ದು, ದೂರುದಾರರು ಅವರ ಮಾತುಗಳನ್ನು ನಂಬಿ ಹಣ ಹೂಡಿಕೆ ಮಾಡುತ್ತಲೇ ಇದ್ದರು.

 

ಹೂಡಿಕೆ ಮಾಡಿದ ಹಣ ಮರಳಿ ಬರದೇ ಇದ್ದುದರಿಂದ, ಇವರು ತನ್ನ ಸ್ನೇಹಿತನಿಗೆ ತಿಳಿಸಿದ್ದು ಈ ವಂಚನೆಯಿಂದ ವ್ಯಕ್ತಿ ಒಟ್ಟು 38,53,961 ರೂ. ಕಳೆದುಕೊಂಡಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.