23 October 2025 | Join group

ಬ್ಯಾನ್ RSS: ಪ್ರಿಯಾಂಕಾ ಖರ್ಗೆ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ಶಾಸಕರ ಒಡೆತನದ ಶಾಲೆಗಳಲ್ಲೇ ಬೈಠಕ್!

  • 13 Oct 2025 10:02:15 AM

ಬೆಂಗಳೂರು: ಆರ್.ಎಸ್.ಎಸ್ ಚಟುವಟಿಕಳ ಮೇಲೆ ನಿಷೇಧ ಹೇರಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ವಿಚಾರ ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ಈ ನಡುವೆ ಕಾಂಗ್ರೆಸ್ ಶಾಸಕರ ಒಡೆತನದ ಶಾಲೆಗಳಲ್ಲಿಯೇ ಆರ್.ಎಸ್.ಎಸ್ ಬೈಠಕ್ ನಡೆಸುತ್ತಿರುವ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

 

ಕಾಂಗ್ರೆಸ್ ಶಾಸಕ ಎಂ.ವೈ.ಪಾಟೀಲ್ ಒಡೆತನದ ಅನುದಾನಿತ ಶಾಲೆಯಲ್ಲಿ ನಿನ್ನೆ ಸಂಜೆ ಆರ್ ಎಸ್ ಎಸ್ ಬೈಠಕ್ ನಡೆದಿದೆ. ಸಚಿವ ಪ್ರಿಯಾಂಕ್ ಖರ್ಗೆ ಪತ್ರದ ಬೆನ್ನಲ್ಲೇ ಈ ಬಗೆಗಿನ ವಿಡಿಯೋಗಳು ವೈರಲ್ ಆಗಿವೆ.

 

ಶಾಲೆಯಲ್ಲಿ ನಿನ್ನೆ ಸಂಜೆ ಪಥಸಂಚಲನ ನಡೆದಿದೆ. ಆರ್ ಎಸ್ ಎಸ್ ಸಮವಸ್ತ್ರ, ಟೋಪಿ ಧರಿಸಿ ಪಥಸಂಚನ ನಡೆಸಲಾಗಿದೆ ಎಂದು ತಿಳಿದುಬಂದಿದೆ.