23 October 2025 | Join group

RSS ಕಚೇರಿಗೆ ಬಿಗಿ ಭದ್ರತೆ; ಪೊಲೀಸರ ನಿಯೋಜನೆ

  • 13 Oct 2025 12:26:44 PM

ಬೆಂಗಳೂರು: ಆರ್.ಎಸ್.ಎಸ್ ರಾಜ್ಯ ಘಟಕದ ಚಾಮರಾಜಪೇಟೆಯ ಕಚೇರಿಗೆ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಪೊಲೀಸರನ್ನು ನಿಯೋಜಿಸಲಾಗಿದೆ.

 

ಚಾಮರಾಜಪೇಟೆಯ ಆರ್.ಎಸ್.ಎಸ್ ಕಚೇರಿಯಲ್ಲಿ ಇಂದು ಸಭೆ ನಡೆಯುವ ಸಾಧ್ಯತೆ ಇದೆ. ಇದರಿಂದಾಗಿ ಆರ್.ಎಸ್.ಎಸ್ ಕಚೇರಿ ಕೇಶವ ಕೃಪಗೆ ಪೊಲೀಸರು ಭದ್ರತೆ ಒದಗಿಸಿದ್ದಾರೆ.

 

ಆರ್.ಎಸ್. ಎಸ್ ಕಾರ್ಯಕ್ರಮಕ್ಕೆ ಸರ್ಕಾರಿ ಜಾಗ ನೀಡದಂತೆ ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಅಲ್ಲದೇ ಜೆಪಿ ಪಾರ್ಕ್ ನಲ್ಲಿ ನಡೆದ ನಡಿಗೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಆರ್.ಎಸ್.ಎಸ್ ಟೋಪಿ ಧರಿಸಿದ್ದ ಶಾಸಕ ಮುನಿರತ್ನ ಅವರನ್ನು 'ಕರಿ ಟೋಪಿ ಎಂಎಲ್ಎ' ಎಂದು ಕರೆದಿದ್ದರು. ಈ ವಿಚಾರವಾಗಿ ಇಂದು ಸಭೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.