ಮಂಗಳೂರು: ಸುರತ್ಕಲ್ ಹತ್ತಿರದ ಕಾಟಿಪಳ್ಳ 9ನೇ ಬ್ಲಾಕ್ ನ ಗುರುನಗರ ಎಂಬಲ್ಲಿ ನಿನ್ನೆ ಭಾನುವಾರ ರಾತ್ರಿ ಮನೆಯೊಂದಕ್ಕೆ ಬಡಿದ ಗುಡುವಿನಿಂದ ಎರಡು ಮನೆಗಳು ಜಖಂ ಆಗಿರುವ ಘಟನೆ ನಡೆದಿದೆ.
ಹರಿಯಪ್ಪ ಮತ್ತು ರವಿಕಲಾ ಎಂಬವರ ಮನೆಗೆ ಗುಡುಗು ಬಡಿದಿದ್ದು, ಮನೆಯ ಎಲ್ಲಾ ಸ್ವಿಚ್‌ಬೋರ್ಡ್ ಗಳು ಸುಟ್ಟು ಕರಕಲಾಗಿದ್ದು, ಮನೆಯ ನೆಲ, ಗೋಡೆ ಮತ್ತು ಮೇಲ್ಛಾವಣಿಗೆ ಹಾನಿಯಾಗಿ ಅಪಾರ ನಷ್ಟ ಸಂಭವಿಸಿದೆ.
ಈ ಘಟನೆಯಲ್ಲಿ ಆರು ಜನ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಭಾರತಿ(30), ವಿನಯ(35), ಕುಸುಮ(55), ಹರಿಯಪ್ಪ(67), ರವಿಕಲಾ (60), ನಿತೀಶ್ (35) ಎಂದು ಗುರುತಿಸಲಾಗಿದ್ದು, ಇವರನ್ನು ಕಾನದ ಮಿಸ್ಕಿತ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನಾಸ್ಥಳಕ್ಕೆ ಸುರತ್ಕಲ್ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಸ್ಥಳೀಯ ಗ್ರಾಮ ಪಂಚಾಯತ್ ಮೂಲಕ ಮುಂದಿನ ಪ್ರಕ್ರಿಯೆ ನಡೆಸಲಾಗಿದೆ.