23 October 2025 | Join group

ವಿಟ್ಲ : ಮದುವೆಗೆ ಹುಡುಗಿ ನೋಡುವ ನೆಪದಲ್ಲಿ ಫೋಟೋ,ವೀಡಿಯೋ ತೆಗೆದು ಬೆದರಿಕೆ, ಹಣ ಲೂಟಿ

  • 14 Oct 2025 10:16:37 AM

ವಿಟ್ಲ: ಹುಡುಗಿ ನೋಡುವ ವಿಚಾರದಲ್ಲಿ ಫೋಟೋ, ವೀಡಿಯೋ ತೆಗೆದು ಬೆದರಿಕೆ ಒಡ್ಡಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಕೇರಳ ನಿವಾಸಿ ಮುಹಮ್ಮದ್ ಅಶ್ರಫ್ ತಾವರಕಡನ್( 53) ಎಂಬಾತ ಸೌದಿಯಲ್ಲಿ ಉದ್ಯೋಗದಲ್ಲಿದ್ದರು. 2024ರ ಸೆಪ್ಟೆಂಬರ್ ನಲ್ಲಿ ಮದುವೆಯ ಸಲುವಾಗಿ ಮಂಗಳೂರಿಗೆ ಬಂದಿದ್ದು, ಅಲ್ಲಿಗೆ ಕರೆಸಿದ ಬಶೀರ್, ಸಫಿಯಾ ಮತ್ತು ಇತರ ಆರೋಪಿತರು ಅವರನ್ನು ಹೆಣ್ಣು ನೋಡುವ ನೆಪದಲ್ಲಿ ಫೋಟೋ, ವಿಡಿಯೋ ತೆಗೆದು, ನಂತರ ಅವುಗಳನ್ನು ಲೀಕ್ ಮಾಡುವುದಾಗಿ ಬೆದರಿಸಿ 44.80 ಲಕ್ಷ ರೂಪಾಯಿ ಹಣ ವಂಚಿಸಿದ್ದಾರೆ ಎಂದು ದೂರುದಾರರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.